ಹಾಳು ಗೋಡೆಯ ಮದ್ಯ ಬಿಡಿ ಕಟ್ಟುವ ಕೆಲಸ
ಅವನಂತೆ,ಅವರಂತೆ ಕಟ್ಟಿದ್ದೆ ನಾನು ಕನಸ ...
ಮಾಡದಿದ್ದರೆ ಕೆಲಸ ಹೊಟ್ಟೆಯ ಹಸಿವು ಕೇಳಬೇಕಲ್ಲ.....
ಕವಿ ಹೇಳಿದ್ದ ನಡೆ ಮುಂದೆ ನಡೆ ಮುಂದೆ
ನಾನು ಹೇಳಿದ್ದೆ ನಡೆಯಬಹುದು ಮುಂದೆ
ಆದರೆ ಇಲ್ಲಿಲ್ಲ ನಡೆಯ ಕಲಿಸೋ ಹಡೆದಾಕೆ ಎಂದೆ........
ಇಲ್ಲಿ ಕನಸುಗಳಿಲ್ಲ ,ನೆನಪುಗಳೂ ಇಲ್ಲ
ವ್ಯಂಗದ ನಗು ಬಿರಿ ನನ್ನೆಡೆಗೆ ಬರುವ ಬಿಡಿಗಳ ಪ್ರಪಂಚವೆಲ್ಲ
ಅದೆಲ್ಲ ಹೋಗಲಿ ಬಿಡು , ಆ ಬಿರುಕು ಗೋಡೆಯ
ಹೊಂಬೆಳಕು ನೋಡು ..........
ಮತ್ತೆ ಮತ್ತೆ ಆ ಬೆಳಕ ನೋಡುವಾಸೆ
ಬಾನ ನಕ್ಷತ್ರದಂತೆ ನಾ ಮಿನುಗುವಾಸೆ ............
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ