ತಿರುಗಿ ನೋಡಿದರೆ ಅವರಾರು ಇಲ್ಲಿಲ್ಲ
ನಿನ್ನೆ ಮೊನ್ನೆ ಸಿಕ್ಕವರು,
ಪ್ರೀತಿಯಿಂದ ನಕ್ಕವರು,ತಲೆ ಕೂದಲ ಬಾಚಿ
ದೃಷ್ಟಿ ತೆಗೆದವರಾರಿಲ್ಲ
ಭಾನ ಚಂದಿರನ ತೋರಿಸಿ
ಊಟ ಮಾಡಿಸಿ ನನ್ನ ನಗು ನೋಡಿ
ಖುಷಿ ಕೊಟ್ಟವರೆಲ್ಲ ನನ್ನ ಜೊತೆ ಈಗಿಲ್ಲ
ಬೆರಳುಗಳ ಜೊತೆ ಬೆರಳನಿಟ್ಟು
ಅಕ್ಷರ ಕಲಿಸಿ,ಕತ್ತಲಿಂದ ಬೆಳಕಿನೆಡೆಗೆ
ಅಂದವರು ಮತ್ತೆ ಸಿಗಲೇ ಇಲ್ಲ ...
ಒಂದೇ ಬಟ್ಟಲಿನಲ್ಲಿ ಊ೦ಡ,
ಹೆಗಲ ಮೇಲೆ ಕೈ ಇಟ್ಟು ಕೊಂಡ
ಕನಸುಗಳನ್ನು ಹಂಚಿ ಕೊಂಡವರಾರು ಈಗ ನನ್ನ ಜೊತೆ ಇಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ