ಪುಟಗಳು

ಭಾನುವಾರ, ಜೂನ್ 17, 2012

ಹಾಳು ಗೋಡೆಯ ಮದ್ಯ..........


ಹಾಳು ಗೋಡೆಯ ಮದ್ಯ ಬಿಡಿ ಕಟ್ಟುವ ಕೆಲಸ
ಅವನಂತೆ,ಅವರಂತೆ ಕಟ್ಟಿದ್ದೆ ನಾನು ಕನಸ ...

ಮಾಡದಿದ್ದರೆ ಕೆಲಸ ಹೊಟ್ಟೆಯ ಹಸಿವು ಕೇಳಬೇಕಲ್ಲ..... 
ಕವಿ ಹೇಳಿದ್ದ ನಡೆ ಮುಂದೆ ನಡೆ ಮುಂದೆ
ನಾನು ಹೇಳಿದ್ದೆ ನಡೆಯಬಹುದು ಮುಂದೆ
ಆದರೆ ಇಲ್ಲಿಲ್ಲ  ನಡೆಯ ಕಲಿಸೋ ಹಡೆದಾಕೆ ಎಂದೆ........

ಇಲ್ಲಿ ಕನಸುಗಳಿಲ್ಲ ,ನೆನಪುಗಳೂ  ಇಲ್ಲ
ವ್ಯಂಗದ  ನಗು ಬಿರಿ ನನ್ನೆಡೆಗೆ ಬರುವ ಬಿಡಿಗಳ ಪ್ರಪಂಚವೆಲ್ಲ 

ಅದೆಲ್ಲ ಹೋಗಲಿ ಬಿಡು ,  ಬಿರುಕು ಗೋಡೆಯ  
ಹೊಂಬೆಳಕು  ನೋಡು ..........

ಮತ್ತೆ ಮತ್ತೆ ಬೆಳಕ ನೋಡುವಾಸೆ

ಬಾನ ನಕ್ಷತ್ರದಂತೆ ನಾ ಮಿನುಗುವಾಸೆ ............

ಮಂಗಳವಾರ, ಜೂನ್ 12, 2012


ಕುಂದಾಪುರದ ಮಿನ  ಪ್ಯಾಟಿ  ಕವನ

ಆ ರಾತ್ರಿ ತಿಂಗಳ ಬೆಳಕ ಕಾಣ ಹೆಣಾ
ಅದ್ರಕಿಂತ ನಿನ್ನ ನೇಗಿ ಸಾಪ  ಹೆಣಾ ...............
ಒಂದ್ಸಲ ನೇಗಿಯಾಡ ಕಾಂಬ
ಕಣ್ಣ ತುಂಬಾ ಕಾಂಬ ಆಸಿ ನಂಗಾ  ....... 
ಅದೆಲ್ಲ  ಹೊಯಿಲಿ ಬಿಡ ಇಗಾ 
ಮುಡಲಾಯಿ ಮೋಡ ಕಾಣ
ಮೋಡದ ಹಿಂದೆ ಕಾಮನ ಬಿಲ್ಲ ಕಾಣ
ಅದೆಲ್ಲ ನಿನ್ನ  ಚೆಂದದ ಹುಬ್ಬಿಗೆ ಸಮಾ..........
 ಮಳಿಗಾಲದ್ದ ಮಿಂಚ ಹುಳ ನಿನ
ನಿನ್ನ ಕಂಡ ಹಾಡ ಹೇಳು ಕೊಂಗಿಲಿ ಹಕ್ಕಿ ನಾನ್
 ನಿನ್ನ ಆಂದು  ಕಂಡ ನಾಚ್ಕಂತ  ನಾಚಿಕಿ ಮುಳ್ಳು
ನಿನ್ನ ಮುಂದೆ  ಶ್ರೀದೇವಿ ಚಂದೂ ಸುಳ್ಳು ...................
 ನಾಳಿಗೂ ಬತ್ತಿ ನಾ ಇದೆ ಮಿನ ಪ್ಯಾಟಿಗೆ
ಎರಡ್ ಮಿನ ಜಾಸ್ತಿ ಹಾಕ್ರೆ ಹಾಡ ಹೇಳ್ತಿ ಸಂತಿ ಕಟ್ಟಿಯಗೆ

ಭಾನುವಾರ, ಜೂನ್ 10, 2012


ಮುಡಿಯ ಬಿಜ ಮನೆಯ ಒಳಗಿದೆ 

ಮುಂಗಾರಿನ  ಮಳೆಗಾಗಿ ಕಾಯುತಿದೆ 
ಮಳೆರಾಯನ ಮಿಲನದ ಕನಸ ನೆಯುತಿದೆ ..... ..... .
 
ಕರುವೊಂದು ಅಂಬಾ ಎನ್ನುತ್ತಿದೆ ಹಟ್ಟಿಯಲ್ಲಿ
ಕುಳ ಕಾಳು ಖಾಲಿಯಾಗಿದೆ ಮನೆಯ  ಪೆಟ್ಟಿಗೆಯಲ್ಲಿ ....
 
ನೇಗಿಲ ಯೋಗಿಯ ಕುತ್ತಿಗೆಯಲಿ ನೋವಿದೆ
ಮಳೆಗಾಗಿ ಬಾನ ಕನಸು  ಕಂಡು ಸಾಕಾಗಿದೆ ....
 
ಇಳಿದು ಬಾ ಮಳೆ ರಾಯ ಇಳಿದು ಬಾ
ಬಡವ ಕಾದಿಹಿನಿಲ್ಲಿ ಇಳಿದು ಬಾ ........