ಪುಟಗಳು

ಬುಧವಾರ, ಜನವರಿ 26, 2011

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು!---ವಾಣಿ-ಧ್ವನಿ-Written by Vani Shetty




ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ…ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ್ಲ.ಆಗೆಲ್ಲ ನಮಗೆ ಬದುಕು ಇಷ್ಟು ಬೇಗ ಆಧುನಿಕವಾಗಿ ಬಿಡಬಹುದು ಅನ್ನೋ ಕಲ್ಪನೆಯೇ ಇದ್ದಿರಲಿಲ್ಲ.ಯಾವ ಗೋಜಲು,ಗೊಂದಲ ಗಳೇ ಇಲ್ಲದ ದಿನಗಳವು!ಸ್ಕೂಲ್ ಡೇಯ ಹಿಂದಿನ ದಿನ ನಾಟಕ ,ಡ್ಯಾನ್ಸ್ ಪ್ರಾಕ್ಟಿಸ್ ಮಾಡಿ ಶಾಲೆಯ ಹಿಂದಿದ್ದ ಮರಗಳ ಅಡಿ ಕುಳಿತು ಮಾತಾಡುವಾಗ ಬಹುಶಃ ನಮ್ಮ ನಾಲ್ವರಿಗೂ ಗೊತ್ತಿತ್ತು ಮುಂದೆ ಹೀಗೆ ಭೇಟಿ ಆಗೋದು ಕಷ್ಟ ಅಂತ.ಅಷ್ಟು ದೂರದ ಕಾಲೇಜಿಗೆ ನಮ್ಮೆಲ್ಲರ ಮನೇಲಿ ಕಳಿಸ್ತಾರೋ ಇಲ್ವೋ ಏನೇ ಆದರೂ ಸಿಗ್ತಾನೆ ಇರೋಣ ಆಯ್ತಾ ಅಂದಾಗ ಹಾಂ ಆಯ್ತು ಅದಕ್ಕೇನು ಅಂದಿದ್ದೆ..ಆಮೇಲೆ ದಿನಗಳೆಲ್ಲ ಹ್ಯಾಗೆ ಓಡಿಬಿಟ್ಟವಲ್ಲ, !ಈಗ ಕಾಡುತ್ತಿವೆ ನೆನಪುಗಳು ಸಾಯುವಷ್ಟು…!ಅಂದುಕೊಂಡಿದ್ದು ಸಾಧಿಸಿ ಸಂಪೂರ್ಣವಾಗಿ ಆಧುನಿಕತೆಯ ಗೂಡೊಳಗೆ ಬಂದ ಮೇಲೆ ಇಂದು ಎಲ್ಲವೂ ಇದೆ ಇಲ್ಲಿ ..ಸಮಯ ಮರೆಸುವ ಸ್ನೇಹಿತರು ,ಅಂತರ್ಜಾಲಗಳು, ರೆಸಾರ್ಟ್, ಗೇಮ್ಸ್,ಪಿಕ್ನಿಕ್ ,…ಇನ್ನೂ..ಆದರೆ ಬರೀ ನೂರು ಪುಟಗಳ ನನ್ನ ಹಳೆಯ ಆಟೋಗ್ರಾಫ್ ಕೊಡೊ ಅಧ್ಬುತ ಭಾವುಕತೆಯನ್ನು ಯಾವ ಆರ್ಕುಟ್, ಫೇಸ್ ಬುಕ್ ಗಳು ಕೂಡಾ ಕೊಡಲಾರವು..ಈ ಆಟೋಗ್ರಾಫ್ ನಲ್ಲಿ ರಜನಿ ಬರೆದ ಒಂದು ವಾಕ್ಯವಿದೆ “ನಮ್ಮ ಜೀವನ ಒಂದು ಬಸ್ ಪ್ರಯಾಣ ಇದ್ದ ಹಾಗೆ .ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿದು ಕೊಳ್ಳಲೇಬೇಕು”..ಹೇಯ್, ತಿರುಗಿ ಬಂದಿದ್ದೆನಲ್ಲಾ ನೀವೆಲ್ಲ ಇಳಿದಲ್ಲಿ ನಿಮ್ಮನ್ನು ಹುಡುಕಿಕೊಂಡು !!?ಎಲ್ಲಿದ್ರಿ ನೀವೆಲ್ಲಾ ಅಲ್ಲಿ ?ಬರೀ 4-5 ವರ್ಷದಲ್ಲೇ ನಿಮ್ಮ ಮೂರೂ ಜನರ ಮದುವೆಯಾಗಿ ಎಲ್ಲೆಲ್ಲೋ ಹೋಗಿಬಿಟ್ಟಿರಲ್ಲ..ನಿನ್ನ ಅಡ್ರೆಸ್ ,ಫೋನ್ ನಂಬರ್ ತುಂಬಾ ಹುಡುಕಿದ್ಲು.ಅಡ್ರೆಸ್ ಕೊಡಲೇ ಇಲ್ವಂತೆ ನೀನು.ಮದುವೆಗ್ ಕರಿಯೋಕೆ ಆಗಲಿಲ್ಲ ಅಂತ ಎಸ್ಟ್ ಬೇಜಾರ್ ಮಾಡ್ಕೊಂಡ್ಲು ಗೊತ್ತ ..ಹೆಚ್ಚು ಕಮ್ಮಿ ಮೂವರ ಮನೆಯಲ್ಲೂ ಹೇಳಿದ ಮಾತಿದು ..ಪೇಲವ ನಗೆ ನಕ್ಕಿದ್ದೆ..ಮುಂದೆ ಎಲ್ಲಿ ಹ್ಯಾಗೆ ಎಷ್ಟು ಓದ್ತೀನಿ ಅಂತ ಗೊತ್ತಿಲ್ಲದವಳು ಏನು ಅಡ್ರೆಸ್ ಕೊಟ್ಟಿರಬೇಕಿತ್ತು?ನಿಮ್ಮೆಲ್ಲರ ಮದುವೆ ಆಲ್ಬಮ್ ನೋಡ್ಲಿಕ್ಕೆ ಸಿಕ್ಕಿದ್ದಷ್ಟೇ ಪುಣ್ಯ !ಹಾಗೆ ವಾಪಾಸ್ ಬರೋವಾಗ ಶಾಲೆಯ ಬಳಿ ಹೋಗಿದ್ದೆ..ಸಡನ್ ಆಗಿ “ಮೈ ಆಟೋಗ್ರಾಫ್ ” ಸಿನೆಮಾ ನೆನಪಾಗಿತ್ತು .ಎಡ ಬದಿಯಲ್ಲಿ ವನ ಮಹೋತ್ಸವ ದ ದಿನ ನೆಟ್ಟ ಹೆಸರು ಗೊತ್ತಿಲ್ಲದ ಗಿಡ ಅಷ್ಟೆತ್ತರಕ್ಕೆ ಬೆಳೆದಿತ್ತು.ಬೆಳಿಗ್ಗೆ ಬೇಗ ಹೋಗಿ ಸರದಿಯ ಪ್ರಕಾರ ಗಿಡಗಳಿಗೆ ನೀರು ಹಾಕಿದ್ದು,ಗಾಳಿ ಮರದ ಕೆಳಗೆ ಸಾಲಾಗಿ ಕುಳಿತು ಓದಿದ್ದು . ಯಾವುದಾದರೂ ಸರ್ ಬರದಿದ್ದಾಗ ಖುಷಿಯಿಂದ ಆಫಿಸ್ ರೂಮ್ನಿಂದ ಓಡಿಬಂದು ಕ್ಲಾಸಿಗೆಲ್ಲ ಕಿರುಚಿ ಹೇಳಿದ್ದು, ..ನೆನಪಿಸಿಕೊಂಡಷ್ಟೂ …..ಆಟದ ಮೈದಾನದ ಪಕ್ಕದಲ್ಲಿದ್ದ ಬಾವಿಯನ್ನೊಮ್ಮೆ ಇಣುಕಿ ನೋಡಿದಾಗ ಏನೋ ತಳಮಳ !ಅದ್ಯಾಕೆ ಕಣ್ಣಲ್ಲಿ ನೀರು ?ಪಕ್ಕದಲ್ಲಿ ರಸ್ತೆಗೆ ಡಾಂಬರು ಹಾಕುತ್ತಿದ್ದವರಿಗೆನೋ ಅನುಮಾನ!ಮತ್ತೆ ಸರಿಯೆನಿಸದೆ ವಾಪಸ್ಸಾಗ ಹೊರಟವಳು ನಿಂತು ಬಿಟ್ಟೆ .ಕೊನೆಯ ಪರೀಕ್ಷೆಯ ದಿನ ಹಿಂದಿದ್ದ ಮಾವಿನ ಮರ ಹತ್ತಿ ಹೊಸ ಟೊಂಗೆಯೊಂದಕ್ಕೆ ನಮ್ಮ ನಾಲ್ವರ ಬಳೆಗಳನ್ನು ಹಾಕಿ ಬಂದಿದ್ದೆವಲ್ಲ ಪ್ರತೀ ವರ್ಷ ಇದೇ ಮಾರ್ಚ್ ನಲ್ಲಿ ಬಂದು ನೋಡೋಣ ಅಂತ,,,ಓಡಿಬಂದು ನೋಡಿದ್ದೆ.ಅರೇ..ಅಲೆಲ್ಲಿತ್ತು ಮರ ?ಅಲ್ಲೊಂದು ಮರವಿದ್ದಿದ್ದೆ ಸುಳ್ಳು ಅನ್ನೋ ಹಾಗೆ ಸಮತಟ್ಟಾದ ನೆಲ .ಪಕ್ಕದಲ್ಲಿ ದೊಡ್ಡ ಟವರ್!ನೀವೆಲ್ಲಾ ಹೋಗಿ ನೋಡಿ ನನ್ನ ತುಂಬಾ ನೆನಪಿಸಿಕೊಂಡಿರಬಹುದಲ್ಲಾ?!ಎಲ್ಲಿ ಹೋದ್ರಿ ನೀವೆಲ್ಲಾ..ಆ ಮರದಡಿ ಬಿದ್ದ ಮಿಡಿ ಗಾಯಿಗಳನ್ನು ಕಾಗೆ ಎಂಜಲು ಮಾಡಿ ತಿಂದ ದಿನಗಳೆಲ್ಲಿ ಹೋಯ್ತು.ಗುಡ್ಡದ ಹಿಂದೆ ಹೋಗಿ ಕಲ್ಲುಗಳನ್ನು ಒಲೆಯಂತಿರಿಸಿ ಮನೆಯಿಂದ ಕದ್ದು ತಂದ ಬೆಲ್ಲವನ್ನು ಪುಟ್ಟ ಪಾತ್ರೆಯಲ್ಲಿ ಬಿಸಿ ಮಾಡಿ ತಿನ್ನುತಿದ್ದ ನಮ್ಮ ನಾಲ್ವರಲ್ಲಿ ನಾನು ಮಾತ್ರ ಯಾಕೆ ಬೇರಾದೆ ..ಯಾಕಿಷ್ಟು ಬದಲಾದೆ?!ಬಿದ್ದ ಹಣ್ಣು ತಿನ್ನೋದ್ಯಾಕೆ ಅಂತ ಎತ್ತರದ ಗೇರು ಮರ ಹತ್ತಿ ಹಣ್ಣನ್ನು ಅಲ್ಲೇ ಕೂತು ತಿಂದು ಇಳಿದಾಗ ಅಂಗಡಿಯ ಅಜ್ಜ ಎಂಥ ಗಂಡು ಬೀರಿ ಇವಳು ಅಂದಾಗ ಕಣ್ಣಲ್ಲಿ ನೀರು ತರಿಸಿಕೊಂಡು ಓಡಿದವಳು ಇಂದು ತಪ್ಪು ಮಾಡಿ ಅದನ್ನೇ ಸಮಜಾಯಿಸಿಕೊಂಡು ಇದು ನನ್ನ “attitude” ಅನ್ನೋ ಹೆಸರು ಕೊಡ್ತೀನಿ .ಭಾಷೆ ,ದೇಶ ಅಂತ ಭಾಷಣ ಬಿಗಿತಿದ್ದವಳು ಇಂದು ಯಾವುದೋ ದೇಶದ ಅಕೌಂಟ್ಸ್ ನೋಡ್ತೀನಿ.ಸ್ವಲ್ಪ ಬದುಕು ಬದಲಾಯಿಸಿದ್ದು,,ಉಳಿದದ್ದು ನಾನೇ ಬದಲಾಯಿಸಿಕೊಂಡಿದ್ದು ..ಹ್ಮ್…..ನಿಮ್ಮನ್ನೂ ಬದುಕು ಈಗ ಯಾವ್ಯಾವ ಗೊಂದಲದಲ್ಲಿ ಇರಿಸಿದೆಯೋ.. ಆಗೆಲ್ಲಾ ಆಡಿದ ಆಟ, ಮಾಡಿದ ತುಂಟತನಗಳನ್ನು ನೆನಪಿಸಿಕೊಂಡರೆ ಅವ್ಯಕ್ತ ವೇದನೆಯಾಗುತ್ತೆ, ಆ ಕಾಲ ಇನ್ನೆಂದೂ ಬರದಲ್ಲ ಅಂತ ನೆನಪಾಗಿ …ಒಮ್ಮೊಮ್ಮೆ ಅನ್ನಿಸುತ್ತೆ ನಾವೆಲ್ಲಾ ಸ್ನೇಹದ ನೆರಳಲ್ಲಿ ಒಂದಾಗಿ ಇರಲೇಬಾರದಿತ್ತೆಂದು.ನೆನಪಿಸಿಕೊಂಡು ಪ್ರತೀ ಸಲ ಖಿನ್ನರಾಗೋ ಬದಲು ಆ ನೆನಪುಗಳೇ ಇಲ್ಲದಿರುತ್ತಿದ್ದರೆ??! ನಂಗೊತ್ತು ಈ ಬದುಕು ,ಕಾಲ ಅದೆಲ್ಲಿಯೂ ನಿಲ್ಲೋದಿಲ್ಲ ,ಸದಾ ನಮ್ಮತನಗಳ ವಿಸ್ತರಣೆಯೊಂದಿಗೆ,ಬೀಸುವ ಬಿರುಗಾಳಿಯಂತೆ. ಒಮ್ಮೊಮ್ಮೆ ಮೈ ಮನಸ್ಸು ಪಡೆದ ಗಾಯ, ನೋವುಗಳನ್ನು ಮರೆಸುವ ವೈದ್ಯನಂತೆ ಉರುಳುತ್ತಲೇ ಇರುತ್ತೆ,ಬದುಕ ಜಾತ್ರೆಯಲ್ಲಿ ಸ್ವಾರ್ಥಿಗಳಾಗುತ್ತ ಮುಂದೆ ಹೋಗುವ ತವಕದಲ್ಲಿ ಹಿಂದೆ ಕಳೆದುಕೊಂಡ ಆಟಿಕೆಗಳ ನೆನಪಿರೋದಿಲ್ಲ ನಮಗೆ ..ನೆನಪಾಗಿ ಹುಡುಕ ಹೊರಟರೆ ಅದು ಮತ್ತೆ ಸಿಗುವುದೂ ಇಲ್ಲ..ಆ ಕಾಲ ಮತ್ತೆ ಬರಲಿ ಅನ್ನಿಸಿದರೂ ಬದುಕಿನ ಜಂಜಾಟ ಬಿಡೋಲ್ಲ,ಯಾರಿಗೂ ಕಾಯದೆ ಚಲಿಸುತ್ತಲೇ ಇರುವ ಕಾಲವನ್ನು ಪುನಃ ತಿರುಗಿಸೋಕೂ ಆಗೋಲ್ಲ..ಆದರೂ ಮತ್ತೆ ಮತ್ತೆ ವ್ಯಥೆಯೆನ್ನಿಸುವುದುಇನ್ನು ಮುಂದೆ ನೀವೆಲ್ಲಾ ಒಂದು ನೆನಪು ಮಾತ್ರ ನನ್ನ ಪಾಲಿಗೆ ಎಂದು ನೆನಪಾದಾಗ !

youth attacks rajesh talwar




ನಿನ್ನೆ NDTV ನ್ಯೂಸ್ ನೋಡ್ತಾ ಇದ್ದಂತೆ ನನ್ನ ಮನಸಿಗೆ ಸ್ವಲ್ಪ ಸಮಾಧಾನ ಕೊಟ್ಟ ವಿಷಯ ಅಂದರೆ youth attacks rajesh talwar ಎನ್ನುವ ಲೈನ್ ....ಅರುಷಿ ಕೊಲೆ ಪ್ರಕರಣದಲ್ಲಿ ಆರೋಪಿ ಹಾಗು ಅರುಷಿಯ ತಂದೆ ರಾಜೇಶ್ ತಲ್ವಾರ್ ಪ್ರಕರಣದಿಂದ ನುಣಿಚಿ ಕೊಂಡಿದ್ದವನಿಗೆ ಉತ್ಸವ್ ಶರ್ಮನಿಂದ ಗೂಸ ಬಿದ್ದಿತ್ತು ..ಕೊನೆಯ ಬಾರಿ ರುಚಿಕಾ ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಆರೋಪಿಯಾಗಿದ್ದ ಹರಿಯಾಣದ ಪೋಲಿಸ್ ಮಹಾ ನಿರ್ದೇಶಕ ರಾಥೋಡನಿಗೂ ಸಹ ಅದೇ ಉತ್ಸವ್ ಶರ್ಮ ಹಲ್ಲೆ ನಡೆಸಿದ್ದ .....ನಮ್ಮಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಥ ಹತ್ತು ಹಲವು ಪ್ರಕರಣಗಳು ಮಾದ್ಯಮಗಳು ಬಯಲು ಮಾಡಿದರು ಆರೋಪಿ ಮಾತ್ರ ತನ್ನ ಅದಿಕಾರ ಮತ್ತು ಹಣ ಬಲದಿಂದ ಬಹು ಸುಲಬವಾಗಿ ಬಚಾವ ಆಗುತಿದ್ದಾನೆ ....ನಾವೆಲ್ಲರೂ ಮುಕ ಪ್ರೇಕ್ಷಕರಂತೆ ಅದನ್ನೆಲ್ಲಾ ನೋಡುತ್ತಾ ಚರ್ಚೆ ಮಾಡುತ್ತ ನಮ್ಮ ದಿನ ಸಾಗಿಸುತ್ತೇವೆ....ಇಂತವರ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತವೆ .....ದೇಶ,ರಾಜ್ಯ ,ಭಾಷೆ ಎನ್ನುತ್ತಾ ಮಾತಾಡಿ ಜನರನ್ನು ಬೇರೆ ಬೇರೆ ಗುಂಪಾಗಿ ಮಾಡಿ ಪ್ರಚಾರ ಗಿಟ್ಟಿಸುವ ಬಿಕನಾಸಿ ಹೋರಾಟಗಾರರು ನಮ್ಮಲ್ಲಿ ಬಿದಿಗೊಬ್ಬರಂತೆ ಇದ್ದಾರೆ ...ಮಾತೆತ್ತಿದರೆ ಧರ್ಮ,ಭಾಷೆ ಎನ್ನುತ್ತಾ ಸಾಗುವ ಇವರು ನಾವೆಲ್ಲ ಒಂದೇ ಎನ್ನುವ ಮಾತನ್ನ ಯಾಕೆ ಹೇಳುದಿಲ್ಲ ...ಪತ್ರಕರ್ತರು ಜನರ ನಡುವೆ ಪ್ರಚಾರ ಗಿಟ್ಟಿಸಲು ಹೋಗಿ ಅವರವರಲ್ಲಿ ಜಗಳ ಮಾಡಿಕೊಳ್ಳುತ್ತಿರುವ್ದು ಸಾಮಾನ್ಯವಾಗಿ ಬಿಟ್ಟಿದೆ .......ಹಿಂದಿನಿಂದ ರಾಜಕಾರಣಿಗಳಿಗೆ ಬೈದು ಅವರಿಗೆ ಛತ್ರಿ ಹಿಡಿದು ತಿರುಗುವ ನಮ್ಮ ಜನ ಯಾಕೆ ಇನ್ನೊಬ್ಬರಿಗೆ ಅನ್ಯಾಯವಗುದನ್ನು ನೋಡುತ್ತಾ ಸುಮ್ಮನಿರುತ್ತಾರೆ ... ನಿತ್ಯನಂದನಂತ ಕಳ್ಳರು ಇನ್ನು ನಮ್ಮ ನಡುವೆ ಮೆರಯೂತಿದ್ದರೆ ...ಭಗತ್ ಸಿಂಗ್ ಬೇಕು ಆದ್ರೆ ನಮ್ಮ ಮನೆಯಲ್ಲಿ ಹುಟ್ಟ ಆತ ಹುಟ್ಟಬಾರದು ಎನ್ನುವವರು ನಾವೆಲ್ಲ ...ಅನ್ಯಾಯವಾಗಿ ಒಂದು ಹುಡುಗಿಯ ಸಾವಿಗೆ ಕಾರಣವಾದ ರಾಥೋಡನಂತ ಕಳ್ಳರನ್ನು ನಾವು ಯಾಕೆ ಇನ್ನು ಬದುಕಲು ಬಿದುತಿದ್ದೇವೆ ಅನ್ನುವುದೇ ಕಾಡುತ್ತಿರುವ ಪ್ರಶ್ನೆ .........

ಸೋಮವಾರ, ಜನವರಿ 24, 2011

ಚಪ್ಪಲಿಯಿಂದ ಹೊಡೆದ ಚೆಲುವೆಯ ನೆನಪಿಗಾಗಿ


ಚಪ್ಪಲಿಯಿಂದ ಹೊಡೆದ ಚೆಲುವೆಯ ನೆನಪಿಗಾಗಿ
ಆ ಚೆಲುವನಿಂದು ಚಪ್ಪಲಿ ಅಂಗಡಿ ಇಟ್ಟಿದ್ದಾನೆ.............

ನನ್ನ ಕವಿತೆಯಲಿ ಅವಳ ಕತೆಯಿದೆ



ನನ್ನ ಕವಿತೆಯಲಿ ಅವಳ ಕತೆಯಿದೆ
ಮೊದಲ ಪ್ರೇಮದ ಸಿಹಿ ನೆನಪಿದೆ
ಕಡಲ ಅಬ್ಬರವ ಮೀರಿಸುವ
ಎದೆಯ ಬಡಿತದ ಸ್ವರವಿದೆ ...
ಅವಳ ಪ್ರೀತಿಯ ಚಿತ್ತಾರವಿದೆ
ಆ ಸಂಬಾಷಣೆಯ ಪ್ರತಿ ಪದವಿದೆ ...
ನನ್ನ ಕವಿತೆಯಲಿ ಅವಳ ಹೆಜ್ಜೆಯ ಗುರುತುಗಳಿವೆ
ಆ ನಗುವಿನ ಹತ್ತಾರು ಅಲೆಗಳಿವೆ
ಲೆಕ್ಕವೆ ಸಿಗದ ಸುಮದುರ ದಿನಗಳ ಹಾಡುಗಳಿವೆ ..........
ಸುಮದುರ ದಿನಗಳ ಹಾಡುಗಳಿವೆ ..........

ಮೂರೂ ದಿನಗಳ ಬದುಕಿದು .....


ಗೆಳತಿ ಮೌನವೆತಕೆ ನಿನಗೆ ?
ಮೂರೂ ದಿನಗಳ ಬದುಕಿದು
ಬಂದು ಹೋಗುವ ದಾರಿಯಲಿ
ಮತ್ತೆ ತಲೆಯೆತ್ತಿ ನಿಲ್ಲು ನಿ ...........
ಮತ್ತೊಂದು ಹೊಸ ಬೆಳಕು ನಿನ್ನ ಮುಂದಿದೆ ...
ಎತ್ತಲಿಂದಲೋ ಬಂದ ಅಮ್ಮ ತೆರಸಳ ಸಿಹಿ ನೆನಪಿದೆ ..........
ಕತ್ತಲಿಗೆ ಬೆಳಕಿಟ್ಟ ಇಂದಿರಾಳ ಆದರ್ಶವಿದೆ ....
ನಿನ್ನಂತೆ ಸೋತು ಗೆದ್ದವರ ಸಂಬ್ರಮದ ಹೊನಲಿದೆ ...............

ಭಾನುವಾರ, ಜನವರಿ 23, 2011




ಅವನು --- ...
ಓ ನನ್ನ ನಾರಿ ಮಣಿ
ನಾನಾಗ ಬೇಕು ನಿನ್ನ ಕಣ್ಮಣಿ ..............
ಅವಳು
ಅದಕ್ಕೇನು ನೀನಾಗು ನನ್ನ ಕಣ್ಮಣಿ........
ಆದರೆ ಕಟ್ಟು ಮೊದಲು ನನಗೆ ಕರಿಮಣಿ ...........




ಬೆಳಗಿನ ರುಚಿಯಾದ ಕಾಪಿಯ ಹಾಗೆ....................................................
ಇ ಜೀವನವೇ ಹೀಗೆ
ಬೆಳಗಿನ ರುಚಿಯಾದ ಕಾಪಿಯ ಹಾಗೆ.............
ಬಣ್ಣವಿಲ್ಲದ ನೀರಿನ ಪಾತ್ರ ನಾ ಮಾಡಬಲ್ಲೆ
ಬಿಳಿಯ ಹಾಲಿನ ಪಾತ್ರೆ ಅವಳಾಗಬಲ್ಲಳೆ............
ಸಿಹಿ ಮತ್ತಿಸ್ಟು ಕಾಪಿ ಪುಡಿಯಂತೆ ಮಕ್ಕಳದ್ರೆ ಸಾಕು.........
ಮುಂಜಾನೆಯ ಬಿಸಿ ಕಾಪಿ ನಾವಾಗಬಲ್ಲೆವು........... ..

ಚಿನ್ನ...... ................................................................
ಅವನು ಹೇಳಿದನು ಅವಳಿಗೆ ನೀನೆ ನನ್ನ ಚಿನ್ನ......
ಕೊನೆಗೂ ಹಾಕಿದನು ಅವಳ ಕುತ್ತಿಗೆಗೆ ಕನ್ನ.........

ಪಂಚರಂಗಿ .......................................................
ನನ್ನವಳು ಪಂಚರಂಗಿ
ಹಾಗಾಗಿ ನಾನು ಹಾಕಿದ್ದೇನೆ
ಹರಿದ ಅಂಗಿ ...............

ಪಂಚ್ಚರು .......................................................
ಗೆಳತಿ ನೀನಾದರೆ ಬೀರು
ನಾನಾಗುವೆ ಬಾರು ...........
ನಾನಾದರೆ ಕಾರು
ನಿನಾಗದಿರು ಪಂಚ್ಚರು .............

ಕಂಬಳ .....................................................................
ಗೆಳತಿ ನೋಡಿ ಬರುವ ನಮ್ಮೂರ ಕಂಬಳ
ಕೈಯಲ್ಲಿ ಇದೆಯಲ್ಲ ಇ ತಿಂಗಳ ಸಂಬಳ


ಮಾಸ್ತರು ಹೇಳಿದ ಕತೆ ..........




ಬಹಳ ಹಿಂದಿನ ಮಾತು ಬರಗಾಲದ ಸಮಯ
ಅದೊಂದು ಸಣ್ಣ ಊರು ಅಲ್ಲೊಂದು ಬಡ ಹೆಂಗಸಿನ ಮನೆ ಇದ್ದಿತ್ತು ..ಅ ಮನೆಯಲ್ಲಿ ಪಾಪ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ ..ಅದೇ ಊರಿನಲ್ಲಿ ಒಬ್ಬ ಬಿಕ್ಷುಕ ಇದ್ದಿದ್ದ ಅವನು ದಿನ ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತಿದ್ದ ...ವಿಶೇಷ ಅಂದ್ರೆ ಆ ಊರಿನಲ್ಲಿ ಯಾರ ಮನೆಗೂ ಅತ ಬಿಕ್ಷೆಗೆ ಹೋದ್ರು ಅವನಿಗೆ ಬೈದು ಕಲ್ಸ್ತ ಇದ್ದರು..."ಹೆಯ ಹೋಗಪ್ಪ ನಮಗೆ ಊಟ ಮಾಡ್ಲಿಕ್ಕೆ ಇಲ್ಲ್ಲ ಇವ ಬೇರೆ " ಅಂತ ಗದರಿಸಿ ಅವನಿಗೆ ಬರಿ ಕೈಯಿಂದ ಕಳಿಸ್ತ ಇದ್ದರು .........ಪಾಪ ಆ ಹೆಂಗಸು ಮಾತ್ರ ಆಕೆಯ ಊಟದಲ್ಲಿ ಆತನಿಗೆ ಒಂದು ಪಾಲನ್ನು ದಿನ ಕೊಡುತ್ತ ಇದ್ದಳು ..ಸರಿ ಅವನು ಖುಷಿಯಿಂದ ಅಲ್ಲಿ ಊಟ ಮಾಡಿ ಹೋಗ್ತಾ ಇದ್ದ .....ಹೀಗೆ ಕಳಿತ ಇರಬೇಕಾದ್ರೆ ಒಂದು ದಿನ ಆ ಹೆಂಗಸು ಸಹ ಏನೋ ಕಾರಣದಿಂದ ಅಡುಗೆನ ಮಾಡಿರಲಿಲ್ಲ ಅವಳು ಸಹ ಉಪವಾಸ ಇದ್ದಿದ್ದಳು ಮಾಮೂಲಿಯಂತೆ ಬಿಕ್ಷುಕ ಅವಳ ಮನೆಗೆ ಬಂದು ಅಮ್ಮ ಬಿಕ್ಷೆ ಅಂತ ಕೂಗ ತೊಡಗಿದ ...ಪಾಪ ಅವಳು ಎಲ್ಲಿಂದ ಬಿಕ್ಷೆ ಕೊಡೋದು "ಇವತ್ತು ಬಿಕ್ಷೆ ಇಲ್ಲಪ್ಪ ನಾನು ಸಹ ಉಪವಾಸ ಇದ್ದೀನಿ " ಅಂತ ಹೇಳಿ ಅವನ ಬಗ್ಗೆ ಕರುಣಾಬಾವದಿಂದ ನೋಡಿದಳು ..ಅದಕ್ಕೆ ಬಿಕ್ಷುಕ ಸಿಟ್ಟಿನಿಂದ ಅವಳನ್ನು ನೋಡಿ" ಇ ರಾಂಡಿಗೆ ಇವತ್ತ ಏನಾಗಿದೆ ನಾನು ಬರ್ತೀನಿ ಅಂತ ಗೊತ್ತಿಲ್ವ " ಎಂದು ಅವಳಿಗೆ ಬೈಯುತ್ತ ಅಲ್ಲಿಂದ ಜಾಗ ಕಿತ್ತ ................
ಕೆಲವೊಂದು ಸಲ ಜನ ಹಿಂದಿನ ದಿನಗಳನ್ನು ಮರೆತು ಬಿಡುತ್ತಾರೆ ತಮಗೆ ಯಾವಾಗಲು ಸಹಾಯ ಮಾಡುವವರು ಒಮ್ಮೆ ಅವರು ಮಾಡಲು ಅಶಕ್ತರಾದೊಡನೆ ಅವರ ಮನಸ್ಸನ್ನು ನೋಯಿಸುತ್ತಾರೆ ....ತಮ್ಮನೂ ಪ್ರೀತಿಸಿದ ತಂದೆ ತಾಯಿಗಳನ್ನ ದ್ವೇಷಿಸುತ್ತಾರೆ ...

ಮಂಗಳವಾರ, ಜನವರಿ 18, 2011

ಕಣಿ ಹೇಳುವ ಹೆಂಗಸು ...........


ಸ್ವಲ್ಪ ಹಿಂದಿನ ಮಾತು ಆಗ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ನಾನು ಊರ ನೆನಪಾದಾಗಲೆಲ್ಲ ಊರಿಗೆ ೩-೪ ತಿಂಗಳಿಗೊಮ್ಮೆ ಬಂದು ಹೋಗುತಿದ್ದೆ....ಸದಾ ಬಸ್ಸಿನಲ್ಲಿ ಪ್ರಯಾಣ ಮಾಡಿ ಬೇಜಾರಾದ ನಾನು ಅ ಸಲ ಟ್ರೈನಲ್ಲಿ ಟ್ರಾವೆಲ್ ಮಾಡಬೇಕೆಂದು ನಿರ್ದರಿಸಿ ಟ್ರೈನ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದೆ ಒಂದು ಸಣ್ಣ ಬ್ಯಾಗ ಕೈಯಲ್ಲಿ ಬಿಟ್ಟರೆ ಬೇರೇನೂ ಲಗೇಜು ಇರಲಿಲ್ಲ ...ನಾನು ಮತ್ತು ನನ್ನ ಗೆಳೆಯರೆಲ್ಲ ತಿರುಪತಿಗೆ ಹೋದಾಗ ಟ್ರೈನಲ್ಲಿ ಹೋಗಿದ್ದೆವು ಹಾಗು ತುಂಬಾ ಖಷಿ ಪಟ್ಟಿದ್ದೆವು ...ಅದನ್ನು ಬಿಟ್ಟರೆ ನಾನು ಟ್ರೈನಲ್ಲಿ ಮತ್ತೆಂದು ಪ್ರಯಾಣ ಬೆಳಸಿರಲಿಲ್ಲ ...train ಸ್ಟೇಷನ್ ಗೆ ಹೋದ ಮೇಲೆ ತಿಳಿಯಿತು ಶಿವಮೊಗ್ಗದ ಟ್ರೈನ್ ಬರಲು ಇನ್ನು ಅರ್ದ ಗಂಟೆ ಕಾಯ ಬೇಕೆಂದು ...ಸರಿ ಇನ್ನೇನು ಮಾಡಲಿ ಟ್ರೈನ್ ದಾರಿಗಾಗಿ ಕಾಯ ತೊಡಗಿದೆ .....ನನ್ನ ಪಕ್ಕದಲ್ಲಿರುವ ಪ್ರಯಾಣಿಕರೊಬ್ಬರು ಮಾತನಾಡುತ್ತ ಇಲ್ಲಿ ಸೀಟ್ ಸಿಕ್ಕಿದರೆ ಅದೊಂದು ದೊಡ್ಡ ಸಾಹಸವೇ ಸರಿ ಅನ್ನುತಿದ್ದರು ಟ್ರೈನ್ ಬಂದೊಡನೆ ಎಲ್ಲರೂ ತಾ ಮುಂದೆ ನಾ ಮುಂದೆ ಎನ್ನುತ್ತಾ ಒಬ್ಬರ ಮೇಲೆ ಒಬ್ಬರ ಬಿಳುತ್ತ ಟ್ರೈನ್ ಹತ್ತ ತೊಡಗಿದರು ..ಅ ಜನ ಜಂಗುಳಿಯನ್ನು ನೋಡಿ ನನಗೆ ಸೀಟ್ ಸಿಕ್ಕಲ್ಲ ಅಂತ ಮನಸಲ್ಲೇ confirm ಮಾಡಿಕೊಂಡೆ .........ಸರಿ ಒಳಗೆ ಹೋಗಿ ನೋಡಿದರೆ ಸ್ವಲ್ಪ ಜನ ಕುಳಿತಿದ್ದರು ಸ್ವಲ್ಪ ಜನ ತನ್ನದೇ ಪ್ರಪಂಚ ಎನ್ನುವಂತೆ ಸಿಟಿನ ಉದ್ದಕ್ಕೂ ಕಾಲು ಚಾಚಿ ಮಲಗಿದ್ದರು ..ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಮಲಗಿದ್ದ ಪ್ರಯಾಣಿಕನ ನಡುವೆ ಜಗಳ ಸಾಗಿತ್ತು "ಹೇಯ ಅದ್ಯಾಕಪ್ಪ ಮಲ್ಕೊಂಡಿದ್ದಿಯ ಎಲ್ಲರು ಸೇರಿ ಕುತ್ಕೊಳ್ಳ ಬಾರದ ಅಂತ ಅವನು ...." ಹೇಯಿ ಏನ ಮಡ್ಕೊಳ್ತಿಯೋ ಮಾಡ್ಕೋ ಸಿಟ ಕೊಡೋಲ್ಲ ಅಂತ ಅವನು " ಅವರಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಮೊದಲೇ ಟಿಕೆಟ್ reserv ಮಾಡಿದರೆ ಇಸ್ಟೆಲ್ಲಾ ಪೋಬ್ಲೆಮ್ ಆಗ್ತಾ ಇರಲಿಲ್ಲ ಅನ್ನುತ್ತ ನನಗೆ ನಾನೇ ಹಳಿದು ಕೊಂಡೆ .......
ಅಲ್ಲಿ ಹೀಗೆ ಗಿಜಿ ಗಿಜಿ ಮಾತನಾಡುವ ಪ್ರಯಾಣಿಕರನ್ನು ಹೊತ್ತ ರೈಲು ಯಶವಂತಪುರ ಸ್ಟೇಷನ್ ನಲ್ಲಿ ಮತ್ತಷ್ಟು ಜನರನ್ನು ತನ್ನ ಹೊಟ್ಟೆಯೊಳಗೆ ಸೇರಿಸಿತ್ತು ....ಆಗ ಆ ಬೋಗಿಯೊಳಗೆ ಒಬ್ಬಳು ದೇವರ(ದೇವಿಯ) ಮೂರ್ತಿ ಹೊತ್ತ ಕಣಿ ಹೇಳುವ ಹೆಂಗಸು ಬಂದಿದ್ದಳು ..ನಾವು ಚಿಕ್ಕವರಿದ್ದಾಗ ಮನೆ ಮನೆಗೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಬರುತಿದ್ದವರು ದೇವರ ಪ್ರಸಾದ ಕೊಟ್ಟು ಕಾಣಿಕೆ ಪಡೆದು ಅದು ಇದು ಅಂತ ಕಣಿ ಹೇಳುತ್ತಾ ಸಾಗುತಿದ್ದರು...ಅವರು ದರಿಸುತಿದ್ದ ಮಣಿ ಸರ ಅವರ ಹೈರ್ ಸ್ಟೈಲ್ ಉತ್ತರ ಕನ್ನಡದ ಬಾಷೆ
ಅವರು ಮಾತನಾಡುವ ರೀತಿ ಎಲ್ಲವೂ ನಮಗೆ ಅವರಲ್ಲಿ ಆಸಕ್ತಿಯನ್ನು ಹುಟ್ಟು ಹಾಕುತಿತ್ತು ...ಅದೇನೇ ಇರಲಿ ಅವಳು ನಿಂತೇ ಇದ್ದಳು ಅದು ತಲೆಯ ಮೇಲೆ ಅ ಅಮ್ಮನವರ ದೇವರ ಮೂರ್ತಿಯನ್ನು ಹೊತ್ತು ಕೊಂಡೆ ನಿಂತಿದ್ದಳು ...ಯಾವೊಬ್ಬನು ಸಿಟಿನಿಂದ ಎದ್ದು ಬನ್ನಿ ಕುಳಿತು ಕೊಳ್ಳಿ ಎಂದು ಹೇಳಲೇ ಇಲ್ಲ ...ದೇವರೆಂದು ಕಂಡ ಕಂಡಲ್ಲಿ ಕೈ ಮುಗಿಯುವ ಜನ ಇವರೇನಾ ಅನ್ನಿಸಿತು ....ದೇವರಿಗೆ ಬೆಲೆ ಕೊಡದೆ ಇದ್ದಾರೆ ಪರವಾಗಿಲ್ಲ ಅ ಮೂರ್ತಿಯನ್ನು ಬಕ್ತಿಯಿಂದ ತಲೆಯ ಮೇಲೆ ಹೊತ್ತು ಒಂದು ರಾತ್ರಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಪ್ರಯಾಣಿಸುವ ಆ ಹೆಂಗಸಿನ ಮುಖವನ್ನು ನನ್ನಿಂದ ನೋಡಲಾಗುತ್ತಿರಲಿಲ್ಲ ..ಅವಳಿಗೆ ಯಾರು ಅನುಕಂಪ ತೋರಲೇ ಇಲ್ಲ ...... ಸಿಟಿನ ಮೇಲೆ ಕಾಲು ಚಾಚಿ ಮಲಗಿದ್ದವನನ್ನು ನೋಡಿ ಸಿಟ್ಟು ಬಂತಾದರೂ ಅವನೊಡನೆ ಜಗಳವಾಡಿ ಪ್ರಯಜನವಿಲ್ಲ ..ಕೆಸರ ಮೇಲೆ ಕಲ್ಲು ಹಾಕಿದ ಹಗೆ ಆಗುತಿತ್ತು .....ದೇವರು ಅದು ಇದು ಎನ್ನುವ ಜನ ಮಾನವಿತೆಯನ್ನು ಯಾಕೆ ಮರಯೂತ್ತಾರೆ ?..ಬಹುಶ ಅ ಒಂದು ನಂಬಿಕೆಯಿನದಲೇ ಆಕೆ ಕೊನೆಯ ತನಕ ಯಾವುದೇ ಆತಂಕವಿಲ್ಲದೆ ಮೂರ್ತಿಯನ್ನು ಹೊತ್ತುಕೊಂಡಿದ್ದಳು ...ಅವಳ ನಂಬಿಕೆ ಏಕಾಗ್ರತೆಗೆ ನಾನು ಸೋತು ಹೋದೆ .......ಮತ್ತೆ ನೋಡುತಿದ್ದಂತೆ ಶಿವಮೊಗ್ಗ ಬಂದೆ ಬಿಟ್ಟಿತು...ಮತ್ತವಳ ಮುಖದಲ್ಲಿ ನಗುವಿತ್ತು ದೇವರಿಗೆ ಅಲ್ಲಿನ ಪರಿಸರದಲ್ಲಿ ಸ್ವಾಗತವಿತ್ತು ....ನನಗೆ ಆ ರೈಲು ಪ್ರಯಾಣ ಸಾಕಾಗಿತ್ತು

ಸೋಮವಾರ, ಜನವರಿ 17, 2011

ಪ್ರೀತಿ




ಪ್ರೀತಿ
ಜಗತ್ತನ್ನು ಪ್ರೀತಿಸುತಿದ್ದ ಕವಿಯೊಬ್ಬ
ತನ್ನ ತಾಯಿಯನ್ನು ಪ್ರೀತಿಸಲು ಮರೆತಿದ್ದ ...........

ಪ್ರೀತಿ ಎನ್ನುವ ಹೆಸರಿನ ಹುಡುಗಿ
ಆ ಪ್ರೀತಿಯಲ್ಲೇ ಕಿತಾಪತಿ ಮಾಡಿಕೊಂಡು ಸತಿಯಾದಳು ......

ಪ್ರೀತಿಗೆ ಸೋಲ ಬಾರದೆಂದು
ನೀತಿ ಪಾಠ ಮಾಡಿದ ಹುಡುಗನೊಬ್ಬ
ಇಂದು ಪಕ್ಕದ ಮನೆಯ ಸ್ವಾತಿಯ ಜೊತೆ ಪರಾರಿಯಾಗಿದ್ದಾನೆ .............

ಸೋಮವಾರ, ಜನವರಿ 10, 2011

ಇಂತಿ ನಿನ್ನ ಮುಸಾ


ಹೆಣ ನಿನ್ನೆಯಿಂದ ನಿಗೊಂದ ಕಾಗದ ಬರಿಕಂದಲಿ ಎನ್ಸಕಂಡ ಎನ್ಸಕಂಡ ಮಂಡಿ ಬಿಸಿ ಮಾಡ್ಕಂಡಿದಿ ....ನಂಗೆ ಕೊರುಕ್ ಅಲ ಬತ್ತಿಲ್ಲ ಮಾರಾಯ್ತಿ ನಾ ನಿನ್ನ ಲವ್ ಮಾಡ್ತಾ ಇದ್ದಿ ಹೆಣ...ನಿಂಗೆ ಹೇಳಕ್ ಹೇಳಕ್ ಅಂದಳೀ ಸುಮಾರಾ ದಿನದಿಂದ ಹುಟಾರ ಹಾಕ್ತ್ ಇದ್ದಿ ...ಮೊನ್ನೆ ಇದನ್ನೇ ಹೇಳಕ ಅಂದಳೀ ನಿಮ್ಮ ಮನಿಗೆ ಬಂದಲ್ಲ ನಿನ್ ಬೈಲ್ ಬದಿಗೆ ಹೊಇದೆ ..ನಿಂಗೆ ಗೊತಿತ ಆ ಬನ್ನಾಡಿ ಕಂಬಳದಗೆ ನಿ ಬಣ್ಣ ಹಚ್ಕಾ ಕೊಣ್ವತ್ತಿಗೆ ನಂಗೆ ಎಸ್ಟ ಖುಷಿ ಆಯಿತು ಗೊತಿತ್ತ ....ನಿನಪ್ಪನ ಡೋಲಿನ ಶಬ್ದಕ್ಕೂ ನಿ ಹಾಕು ಹೆಜ್ಜಿಗು ಆ ಕೋಣ ಓಡು ಚೆಂದ ಅಲ ಕಾಂತೆ ಕುಕಣಕ....ಅದೆಲ ಹುಲಿ ಹಿಡಿಲಿ ಹೆಣ ನೀನ ನೆಡು ಚೆಂದ ನಿನ್ನ ಮಾನಕನುಂಡಿ ಮುಗ ...ನಿನ್ನ ದೊಳ ಕಣ್ಣ ನಿನ್ ಗೊಗ್ಗರ ಹಲ್ಲ ಎಲ್ಲ ನನಗೆ ಮರುಕೆ ಆತ್ತ....ನಿ ಮನ್ಸ ಮಾಡ್ರೆ ಇ ಸಲದ್ದ ಕೊಡಿ ಹಬ್ಬಕ್ಕೆ ಒಟ್ಟಿಗೆ ಹೊಯಿಲಕ್ಕ...ನಿಂಗೆ ನಾನ್ ಅಕ್ಕಂಬಗೆ ಆರೆ ನಾಳಿ ಕೊಳಿಪಡಿಗೆ ಬಾ
ಇಂತಿ ನಿನ್ನ ಮುಸಾ

ಶನಿವಾರ, ಜನವರಿ 8, 2011

ಕುಂದಾಪುರ ಗಿಳಿಯಾರು ಕನ್ನಡದಲ್ಲಿ ಮುಂಗಾರು ಮಳೆ ಡೈಲಾಗು -




ಕುಂದಾಪುರ ಗಿಳಿಯಾರು ಕನ್ನಡದಲ್ಲಿ ಮುಂಗಾರು ಮಳೆ ಡೈಲಾಗು -


---------------ಮಳಿ ಬಪ್ಪತ್ತಿಗೆ ಗಂಟಿ ಎಂಥಕೆ ಕೇಂತೆ ಹೆಣ.........ಗಂಟಿ ಇಪ್ಪದೆ ಕೈ ಕೊಡುಕೆ ನನ್ನ ಟೈಮ್ ಸರಿ ಇಲ್ಲ್ಯ...ನನ್ನ ಟೈಮ್ ಗರಗರ ಮಂಡಲ ಐತ ಹೆಣ .......ನಿ ನಂಗೆ ಸಿಕ್ತೆ ನಂಗು ನಿಂಗು ನಾಕ ಒಡ್ಡಿ ಮಕ್ಕಳತೋ ಅಂದಲಿ ಏನ್ಸಕಂಡಿದಿ ....ಅರೆ ನಂಗೊತ್ತಿತ್ ನಿ ನಂಗೆ ಸಿಕ್ಕುದಿಲ್ಲ ....ಟೈಮ್ ಸರಿ ಇಲ್ದಿರ್ ಕೊಡಲೇ ಮನ್ಸ ತಲಿ ಕೆರಕಂಡ ತಲಿ ಕೊಳ್ತ ಹೋಯಿ ಕನ್ಸರ್ ಆಯಿ ಡಾಕ್ಟರ ತಲಿನೆ ಕಡಿಕ ಅಂತ್ರಮ್ಬ್ರ....ಅಂತದ್ರಗೆ ನಾನು ಇ ಎದಿ ಗೂಡಿಗೆ ಕೈ ಹಾಕಿ ಪರ ಪರ ಹರ್ಕಂಡದಿ ....ನನ್ನ ಎದಿಗೂಡೇ ಹೋಳ ಐಥ ಹೆಣ ...ನಿನ್ನ ಚೆಂದು ನಿನ್ನ ನೇಗಿ ...ನಾ ತಯಿಸಿ ಕೊಟ್ಟ ಹಬ್ಬದ ವಾಚ್,ಇ ಜರು ಮಳಿ ,ಆ ವಂಡಾರ್ ಕಂಬಳದಗೆ ಕೊಣದ್ದ ನೆನಪ ಎಲ್ಲ ಮಿಕ್ಸ ಆಯಿ ಮಿಕ್ಷಿಗೆ ಹಾಕಿ ಕಡದಂಗೆ ಆತ್ತ....ಆರೇ ಒಂದ ಮಾತ ನೆನಪಿಟ್ಕೋ ನಾನ ನಿನ್ನ ಪೀರುತಿ ಮಾಡದಂಗೆ ಯಾರು ಮಾಡುದಿಲ್ಲ .......ನಾನ ನಿನ್ನ ಪೀರುತಿ ಮಾಡದಂಗೆ ಯಾರು ಮಾಡುದಿಲ್ಲ-

ಇಲ್ಲ ಮರೆ ತ್ರಿಬ್ಬಲ್ ಹಾಕಲ್ಲ ಪೋಲಿಸ್ನವರು ಇದ್ದಾರೆ ಹೀಗಂತ ಹತ್ತು ಹಲವು ಶಿಸ್ತಿನ ಮಾತು ಕೇಳಿ ಬರುತಿರುವುದು ನಮ್ಮ ಊರಾದ ಕೋಟದಲ್ಲಿ ....ಕಳೆದ ಹಿಂದೆಂದು ಬಾರಿ ಕಂಡಿರದ ಶಿಸ್ತು ಜನತೆಯಲ್ಲಿ ಕಂಡು ಬರುತ್ತಾ ಇದೆ ...ಅದಕ್ಕ ಕಾರಣ ಕೋಟದ ಎಸ್ಐ ಶ್ರೀ ಮಹೇಶ್ ಪ್ರಸಾದ್ರವರು ....ಕಳೆದ ೪-೫ ವರುಷಗಳಿಗೆ ಹೋಲಿಸಿದರೆ ನಮ್ಮೂರು ಎಸ್ಟೋ ಸುಧಾರಿಸಿದೆ ...ಮೊದಲಿನಂತೆ ಇಸ್ಪಿಟ್,ಗರ ಗರ ಮಂಡಲ ,ಕೋಳಿ ಪಡೆಯಂಥ ಜೂಜು ಆ ಗ್ರಾಮೀಣ ಬಾಗದಲ್ಲಿ ಕಾಣುತ್ತಿಲ್ಲ ......ಕಳ್ಳ ಬಟ್ಟಿ ಸರಾಯಿ ಅದು ಇದು ಅಂತ ಮಾತಾಡುತ್ತಿದ್ದ ಜನ ಈಗ ಅವುಗಳ ಹೇಳ ಹೆಸರಿಲ್ಲದಂತಾಗಿದೆ......ಇವತ್ತಿನ ದಿನಗಳಲ್ಲಿ ಮಾತಾನಡುವರು ಜಾಸ್ತಿ ಕೆಲಸ ಮಾಡುವವರು ತುಂಬಾ ಕಡಿಮೆ......ಯಾವೊಂದು ವ್ಯಕ್ತಿಗೂ ಕ್ಯಾರೆ ಮಾಡದ ಮಹೇಶ್ ಪ್ರಸಾಧರವರು ಎಲ್ಲರೂ ರೂಲ್ಸ್ ಅನ್ನು ಅನುಸರಿಸಲೇ ಬೇಕು ಅನ್ನುತ್ತಾರೆ ......ಹಣ ಕೊಟ್ಟರೆ ಸಾಕು ಎಲ್ಲವು ಸರಿಯಾಗುತ್ತದೆ ಎಂದು ಬಾವಿಸಿದವರಿಗೆ ಕೋಟದ ಎಸ್ಐ ಬೆಂಕಿಯಂತೆ ......ಕೆಲವೊಮ್ಮೆ ಸಾಮಾನ್ಯ ನಾಗರಿಕರಂತೆ ಓಡಾಡಿಕೊಂಡೆ ಸಮಾಜದ ಜನರಿಗೆ ಶಿಸ್ತಿನ ಪಾಠ ಹೇಳುತಿದ್ದಾರೆ ......ಪೋಲಿಸ್ ವ್ಯವಸ್ತೆಗೆ ಉಗುಳುತಿದ್ದ ನಾವೆಲ್ಲರೂ ಇವರಂಥ ಅದಿಕಾರಿಯನ್ನು ಪ್ರಶಂಸಿಸಲೇ ಬೇಕು .....ಹಿಂದೂ ಮುಸ್ಲಿಂ ಎಂದು ನಮ್ಮ ನಮ್ಮಲ್ಲೇ ಬೆಂಕಿ ಹಚ್ಚಿಸುವ ಸಮಾಜ ಘಾತಕ ಶಕ್ತಿಯನ್ನು ಬಡಿದು ನಿಂತಿದ್ದಾರೆ.....ಎಲ್ಲ ಎಸ್ಐಗಳು ಹೀಗೇಕೆ ಇರಬಾರದು ಎಂದು ಅನ್ನಿಸದೆ ಇರದು ........ವಡ್ಡರ್ಸೆಮದುಕರ ಶೆಟ್ಟಿಯವರಂತೆ ಇವರನ್ನು ನಮ್ಮ ಕೊಳಕು ರಾಜಕಿಯದವರು ಅದು ಇದು ಅನ್ನುತ್ತ ವರ್ಗಾವಣೆ ಮಾಡದಿರಲಿ......ಇಂತ ಅಪರೊಪದ ವ್ಯಕ್ತಿಗಳಿಂದಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಇಂದಿಗೂ ರಾಷ್ಟ್ರದಲ್ಲಿ ಮಿಂಚುತ್ತಿದೆ ........

ಮಂಗಳವಾರ, ಜನವರಿ 4, 2011

ಅಥಿತಿ


ನಿನ್ನೆ ನಮ್ಮ ಮನೆಗೆ ಬಂದಿದ್ದರು ಅಥಿತಿ
ನನ್ನ ಪ್ರೀತಿಯ ಹೆಂಡತಿ ಶಾಂತಿ
ಮಾಡಿದಳು ಅವರಿಗಾಗಿ ಚಪಾತಿ
ಈಗ ಅವರು ಮಾಡುತಿದ್ದಾರೆ ವಾಂತಿ


ಭಾನುವಾರ, ಜನವರಿ 2, 2011


ನಮ್ಮೂರ ಸುಬ್ಬಿಯ ಬಗ್ಗೆ ..........
ಮುಂಜಾನೆಯಿಂದ ಸಂಜೆಯಾ ತನಕ ಬಟ್ಟರ ಹೊಲದಲ್ಲಿ ಕೆಲಸ ಮಾಡುತಿದ್ದ ಸುಬ್ಬಿಸಂಜೆ ಗುಡಿಸಲಿಗೆ ಮರಳುವ ಮುನ್ನ ಕೊಂಚ ಸಾರಾಯಿಯನ್ನು ಕುಡಿದು ಹೋಗುತಿದ್ದಳು ....ಒಡಲ ಮತ್ತು ಮನದ ನೋವ ಮರೆಯಲೆಂದು ಕುಡಿತವನ್ನು ತನ್ನ ದಿನನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಂಡಿದ್ದು ಬಿಟ್ಟರೆ ಸುಬ್ಬಿ ನಮ್ಮೆಲ್ಲರ ಅಚ್ಚು ಮೆಚ್ಚು ....ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಎಲ್ಲರೂ ಸುಬ್ಬಿವಿಗೆ ಗೆಳೆಯರು .....ಕೆಲಸಕ್ಕಾಗಿ ಹೊಲಕ್ಕೆ ಬರುತಿದ್ದ ಸುಬ್ಬಿ ಸದಾ ಜನಪದ ಹಾಡುಗಳನ್ನು ಹೇಳಿ ಎಲ್ಲರನ್ನು ಖುಷಿ ಪಡಿಸುತ್ತಿದ್ದಳು ...ಮೊನ್ನೆ ಊರಿನ ಬಾವಿಗೆ ಯಾರೋ ಮಕ್ಕಳು ಕಸ ಹಾಕಿದ್ದರೆ ಅಂದು ತಿಳಿದು ಚಿರಾಡಿದ್ದಳು.......ಎಲೆ ಅಡಿಕೆಯನ್ನು ತಿಂದು ತುಟಿಯನ್ನು ಕೆಂಪಗಿರಿಸಿ ಕೊಂಡು ನಗುತಿದ್ದಳು .......ತನ್ನ ನಾಲ್ಕನೆ ಮಗನು ಪಕ್ಕದ ಊರಿನ ಹುಡುಗಿಯೊಂದಿಗೆ ಓಡಿಹೋದಾಗ ....ನನ್ನ ಮಗನು ಸತ್ತಿದ್ದಾನೆ ಅವನ ಬೊಜ್ಜ ನಾಳೆ ಎಂದು ಹುಚ್ಚಿಯಂತೆ ಏನೇನೊ ಮಾತನಾಡುತಿದ್ದಳು.....ಊರಿನ ಯಾವ ಮೂಲೆಯಲ್ಲಿ ಯಕ್ಷಗನವಾದರು ಅಲ್ಲಿ ಹಾಜರಗುತಿದ್ದ ಅವಳು ಎಲ್ಲರಿಗೂ ಚಿರಪರಿಚಿತಳು ......

ನಾವು ಚಿಕ್ಕವರಿದ್ದೆವು ಆಗ ಚುನಾವಣೆಯ ಪ್ರಚಾರ ಊರಲ್ಲಿ ಸಾಗಿತ್ತು ಎಲ್ಲಿ ನೋಡಿದರಲ್ಲಿ ಬ್ಯಾನರಗಳು ಬಿದ್ದು ಕೊಂಡಿದ್ದವು ...ರಾಜಕಾರಣಿಗಳ ದೊಡ್ಡ ಫೋಟೋಗಳು ಸಿಕ್ಕ ಸಿಕ್ಕಲ್ಲಿ ನೆತಾಡುತಿದ್ದವು ಒಟ್ಟಿನಲ್ಲಿ ಪ್ಲಾಸ್ಟಿಕ್ ಬೆಳೆ ಚೆನ್ನಾಗಿ ಚಿಗುರಿತ್ತು ....ಚುನಾವಣೆಯ ಕಣದಲಿದ್ದ ಕಾಂಗ್ರೆಸಿನ ಅಬ್ಯರ್ಥಿ ಮೋಟಮ್ಮ (ಎಮ್ಮೆಯಂತೆ ಇರುದರಿಂದ ಆ ಹೆಸರು ಇಟ್ಟಿರಬಹುದು ) ನಮ್ಮೂರಿಗೆ ಚುನಾವಣ ಪ್ರಚಾರಕ್ಕೆ ಬಂದಿದ್ದಳು... ಸುಮ್ಮನೆ ಕೇಳಬೇಕೆ ನಮ್ಮರಿನ ಶಾಲೆಯಲ್ಲಿ ಆಯೋಜಿಸಿದ್ದ ಆ ಬಾಷಣ ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರಿದ್ದರು (ಮೊಟಮ್ಮನ ಬಾಷಣಕ್ಕಿಂತ ಅಲ್ಲಿ ಮಾಡಿರುವ ಬಿರಿಯಾನಿ ಮತ್ತು ಸರಾಯಿ ಸೇವೆಗಾಗಿ )
ಮೊದಲೇ ಮಾತಿನ ಮಲ್ಲಿಯಾಗಿದ್ದ ಸುಬ್ಬಿಸಬೆಯೊಳಗೆ ಕಾಲಿಟ್ಟು ಒಂದೇ ಸಮನೆ ಅವ್ಯಾಚ ಶಬ್ದಗಳಿಂದ ಹೆಯ್ಯ ರಾಂಡಿ ಮಕ್ಕಳ್ ನಮಗಿಲ್ ಒಪ್ಪತ್ತಿಗ್ ಉಮ್ಬ್ಕೆ ಗತಿ ಇಲ್ಲ ....ಊರ ಬದಿ ಗಂಡಸರಿಗೆ ಸರಾಯಿ ಕೊಡ್ತ್ರಿ ಅಲ್ದಾ ..ಒಂದ್ ಸೇರಕ್ಕಿ ಕೂಲಿಗೆ ಒಡಿಯರ ತೊಂಟದಗೆ ದುಡಿಕ.....ಅದೇ ದುಡ್ಡನ್ನ ಬಡವರಿಗೆ ಹಂಚುಕಾಗ್ದ .....ನಿಮ್ಮ ವಾಲೀ ಕಲಿತ್ತ ಅನ್ನುತ್ತ ಗಟ್ಟಿಯಾಗಿ ಕೂಗುತಿದ್ದ ಸುಬ್ಬಿಗೆ ಜನರೇ ಗದರಿಸಿದ್ದರು....




ಅವಳು ಸುಂದರಿ ಅವನು ಅಸ್ಟೇ ಕೃಷ್ಣ ಸುಂದರ
ಅವಳಿಗಿನ್ನೂ ಇಪ್ಪತಯಿದರ ಹುಡುಗಿ ಅವನಿಗಾಗ ಮೂವತ್ತು ತುಂಬಿತ್ತು
ಇವರಿಬ್ಬರೇ ನನ್ನ ವಾಸ್ತವ ಕತೆಯ ಕವಿಗಳು

ಮತ್ತದೇ ವದು ವರರ ಅನ್ವೇಷನೆಯಲಿದ್ದರು ಮನೆಯವರು
ಎರೆಡು ಮನೆಯವರಲ್ಲಿ ಮಾತುಕತೆ ಮುಗಿಯಿತು
ಹುಡುಗಿ ತುಂಬಾ ಓದಿದ್ದಾಳಂತೆ ಹುಡುಗನಿಗೆ ಕೈ ತುಂಬಾ ಸಂಬಳವಂತೆ
ಹಾಗೆ ಅಂತೆ ಕಂತೆಯ ನಡುವೆ ಸಂಬಂದ ಕುದುರಿತ್ತು

ಮತ್ತೆನು ಕರಾವಳಿಯ ಜನರಲ್ಲವೆ ವರದಕ್ಷಿಣೆಯ ಮಾತು ಅಲ್ಲಿತ್ತು
ನೋಡು ನೋಡುತಿದ್ದಂತೆ ನಿಶಿತಾರ್ಥ ನಡೆದಿತ್ತು
ಮದುವೆಗೆ ಆರೇಳು ತಿಂಗಳು ಮಾತ್ರ ಬಾಕಿ ಇತ್ತು

ಹುಡುಗನಿಂದ ಹುಡುಗಿಗೆ ದಿನಕ್ಕಾರು ಫೋನ್ ಕಾಲ್
ನೇಸರನು ಬೆಳಗುವ ಮೊದಲೇ ಹುಡುಗಿಯಿಂದ ಮಿಸ್ ಕಾಲ್
ಮತ್ತದೇ ಪ್ರೀತಿ ಬೆಳೆದಿತ್ತು ಕನಸು ಕಂಡರವರು ಹಗಲಿರುಳು
ಇಲ್ಲಿ ತನಕವೂ ಎಲ್ಲವು ಸರಿಯಾಗೇ ಇತ್ತು
ಅವರ ಗ್ರಹಚಾರಕ್ಕೆ ಕೆಟ್ಟ ಸುದ್ದಿಯೊಂದು ಬಂತು

ಅ ದಿನ ಹುಡುಗಿ ಕಾಲ್ ಮಾಡಿಲ್ಲ ಅವಳ ಫೋನ್ ಸ್ವಿಚ್ ಆಫ್ ಇತ್ತು
ಹುಡುಗನ ಮನಸು ಹಾರಡ ತೊಡಗಿತ್ತು ಎದೆ ಬಡಿತ ಹೆಚ್ಚಾಗಿತ್ತು
ಮತ್ತೆರಡು ದಿನಗಳು ಕಳೆದಿತ್ತು ಅವನ ಹೆಸರಿಗೆ ಅವಳಿಂದ ಪತ್ರ ಒಂದು ಬಂದಿತ್ತು
ಪತ್ರದ ಸಾಲುಗಳು ಕೆಳಗಿನತಿತ್ತು

ನನ್ನ ಪ್ರೀತಿಯ ಹುಡುಗ, ಕಳೆದರೆಡು ದಿನಗಳಿಂದ ನಾನು ಜ್ವರದಿಂದ ಮಲಗಿದ್ದೆ
ನಿನ್ನೆ ತಲೆ ಸುತ್ತಿದಂತಾಗಿ ಆಸ್ಪತ್ರೆಗೆ ಹೋಗಿದ್ದೆ
ನಿನ್ನೆ ತಾನೆ ನನಗೆ ಗೊತ್ತಾಗಿದ್ದು
ನನಗೆ ಮುಂದೆ ಮಕ್ಕಳಾಗುವುದು ಅನುಮಾನವಂತೆ
ಅದೇನೋ ಗರ್ಬ ಕೋಶದ ತೊಂದರೆ
ಅದರಿಂದ ಬರುತಿತ್ತು ಇ ತಲೆ ಸುತ್ತು
ಮಾಡಲೇ ಬೇಕು ಅಪರೇಷನ್ ಅನ್ನುತಿದ್ದರೆ ನನ್ನ ಪರೀಕ್ಷೆ ಮಾಡಿದ್ದ ಡಾಕ್ಟರ……..
ಗೆಳೆಯ ಆಕಾಶ ಕಳಚಿ ಬಿದ್ದಂತೆ ಆಯಿತು
ನನಗೆ ದಿಕ್ಕು ತೊಚಾದಾಯಿತು
ನನ್ನ ಮನಸು
ಕನಸುಗಳೆಲ್ಲ ಕರಟಿ ಹೋಗಿದೆ…………
ಓ ನನ್ನ ಜೊತೆಗಾರ ಇ ಕಾರಣಕ್ಕಾಗಿ
ನಾನು ಮೂಕಳಾಗಿದ್ದೇನೆ ..
ನನ್ನ ಕೈಯ ಬಿಡದಿರು ಎಂದಸ್ಟೇ ಹೇಳಬಲ್ಲೆ
ಇಂತಿ ನಿನ್ನವಳು .......

ಕಾಗದವನ್ನು ಓದಿ ಮುಗಿಸುತ್ತಿದ್ದವನಿಗೆ
ಮುಖದಲ್ಲಿ ಬೆವರು ಇಳಿದಿತ್ತು ಮೌನ ಆವರಿಸಿತ್ತು
ಅದಕ್ಕವನು ಅವಕ್ಕಾಗಿ ಬಿಟ್ಟ
ಮನೆಯವರಿಗೆ ವಿಷಯ ತಿಳಿಸಿ ಬಿಟ್ಟ
ನನಗಿನ್ನೂ ಆ ಹುಡುಗಿ ಬೇಡವೆಂದು ಬಿಟ್ಟ
ಮಕ್ಕಳಾಗದ ಹುಡುಗಿ ನನಗ್ಯಾಕೆ? ಅಂದು ಬಿಟ್ಟ

ಮಾವನಾಗದ ಮಾವ ಹುಡುಗಿ ಮನೆಗೆ ಬಂದ
ಇ ಮದುವೆ ಕ್ಯಾನ್ಸಲ್ ಅಂದ .............

ಹುಡುಗಿ ಅತ್ತಳು ಅವಳೊಂದಿಗೆ ಅವಳ ಮನೆಯವರೆಲ್ಲ
ಮತ್ತೆ ಮತ್ತೆ ಮಾವನ ಕಾಲು ಹಿಡೀದು ಒಂದೇ ಸವನೆ ಅಳುತಿದ್ದಳು

ವಿಷಯ ತಿಳಿಯಿತು ಅವನ ತಮ್ಮನಿಗೆ
ಮತ್ತೆ ಒಂದೇ ಮಾತಲೀ ಅವಳ ಮನೆಗೆ ಬಂದವನೇ
ಅವಳಲ್ಲಿ ಹೇಳಿದವ ನಿ ಒಪ್ಪಿದರೆ ನಾ ಇ ಮದುವೆಗೆ ಸಿದ್ದ
ಅಳು ಬರುವ ಕಣ್ಣಲ್ಲಿ ಅಶ್ರುದಾರೆ ಸುರಿಯಿತು
ಮನದಲೊಂದು ದೇವರಂತೆ ಕಂಡನವ……….

ಇನ್ನೇನು ಬೇಕು ಆ ಸುಂದರಿಗೆ ಮತ್ತೆರೆಡು ತಿಂಗಳಲ್ಲಿ
ಮದುವೆ ಆಗಿತ್ತು ಇ ಸಜ್ಜನನೊಡನೆ .......

ಮತ್ತೇನೋ ಸಮಯ ಉರುಳಿತ್ತು ಮೊನ್ನೆ ಹೋಗಿದ್ದೆ ಆ ಮನೆಗೆ
ಬದಿಯ ಕೊನೆಯಲ್ಲಿ ಕುಳಿತಿದ್ದ ಆ ಮೊದಲ ನಿಶ್ಚಿತಾರ್ತದ ಹುಡುಗ

ಅರೆ ಕ್ಷಣಗಳಲ್ಲಿ ತಿಳಿಯಿತು ಅತ ಕಾಲು ಕಳೆದು ಕೊಂಡಿದ್ದ ಕಳೆದ ವರುಷದ ಕಾರ್ ಆಕ್ಸಿಡೆಂಟ್ನಲ್ಲಿ
ಮತ್ತವನ ತಮ್ಮ ಮತ್ತವಳು ಇದ್ದಾರೆ ಸುಖದಿಂದ ಬೆಂಗಳೂರಿನಲ್ಲಿ

ಮನದಲ್ಲನಿಸಿತು ಹುಡುಗಿ ಅದೃಷ್ಟವಂತೆ
ಮತ್ತನಿಸಿತು ಅವನು ಇನ್ನು ನಿಶಿತಾರ್ಥದ ಹುಡುಗ
ಜೆ.ಪಿ…………..