ಪುಟಗಳು

ಶನಿವಾರ, ಆಗಸ್ಟ್ 7, 2010

ನೀ ಬಾರದೇ ಹೋದರೆ

ಎಲೆ ಕೆಂಚಿ ತಾರೆ ನಮ್ ಮನೆ ತನಕ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ
ನಾ ಕೆರೆ ಬಾವಿ ಪಾಲೆ||

ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಊರೆಲ್ಲ ಬಳಸೋದು ಆ ನೀರೆ
ಊರೆಲ್ಲ ಬಳಸೋದು ಆ ನೀರೆ
ಬಾರೇ ಮನೆಗೋಗೋಣ||

ಅತ್ತಲ್ಲಿಂದ ನೀನು ಬಂದೆ ಇತ್ತಲ್ಲಿoದ ನಾನು ಬಂದೆ
ನಿನ್ನ ಮೋರೆ ಮುಸುಕ ತೆಗೆಯೇ
ನಿನ್ನ ಮೋರೆ ಮುಸುಕ ತೆಗೆಯೇ
ಮೋರೆಯ ನೋಡೋಣ||

ನೆನ್ನಿಂದ ಮೊನ್ನಿಂದ ನಿನ್ನ ಮ್ಯಾಗಳ ಗ್ಯಾನ
ಸುಣ್ಣದ ನೆಪ ಮಾಡಿ ಸುಳಿದಾಡು
ಮನೆ ಮುಂದೆ ಸುಣ್ಣದ ನೆಪ ಮಾಡಿ ಸುಳಿದಾಡು
ಬಾರೇ ಮನೆಗೋಗೋಣ||

ನಡುವಿಗೆ ವಡ್ಡ್ಯಾಣ ಮಾಡಿಸಿ ಕೊಡುವೆ
ಕಾಲoದಿಗೆ ಗೆಜ್ಜೆ
ಬೆಳ್ಳಿ ಕಾಲoದಿಗೆ ಗೆಜ್ಜೆ
ಬಾರೇ ಮನೆಗೋಗೋಣ||

ಮಾಗಿ ಹೊಡೆದಾರೆ ಹೆoಟೆ ಜಾಲಿ ಹೊಡೆದಾರೆ ಕೆಚ್ಚೆ
ಗಲ್ಲ ಕಡಿದರೆ ಬೆಲ್ಲದಚ್ಚೆ
ನಿನ್ನ ಗಲ್ಲ ಕಡಿದರೆ ಬೆಲ್ಲದಚ್ಚೆ
ಬಾರೇ ಮನೆಗೋಗೋಣ||

ಅಕ್ಕ ತಂಗ್ಯಾರೂ ನಾವು ರೊಕ್ಕ ಕೇಳೋರಲ್ಲ
ನನ್ನ ಗ್ಯಾನ ಬಿತ್ತಲ್ಲೋ ನಿನ್ನ ಮೇಲೆ
ನನ್ನ ಗ್ಯಾನ ಬಿತ್ತಲ್ಲೋ ನಿನ್ನ ಮೇಲೆ
ಬಾರೋ ಮನೆಗೋಗೋಣ

ಕಾಮೆಂಟ್‌ಗಳಿಲ್ಲ: