ಪುಟಗಳು

ಸೋಮವಾರ, ಫೆಬ್ರವರಿ 28, 2011

ಮಂಗಳವಾರ, ಫೆಬ್ರವರಿ 22, 2011

ಗೆಳತಿ ನಿ ಇಟ್ಟುಬಿಡು ನಗುವಿನ ಅಂಗಡಿ ........


ಗೆಳತಿ ನಿ ಇಟ್ಟುಬಿಡು ನಗುವಿನ ಅಂಗಡಿ
ನಾ ಕೊಳ್ಳಬಲ್ಲೆ ನನ್ನ ಹೃದಯವ ಅಡವಿಟ್ಟು
ನಿನ್ನ ನಗುವಿನ ಪ್ರತಿ ಸಾಲು ಸಾಲು ..........

ಚೆಲುವೆ ನಿನಾಡುವಾಗ ಮುತ್ತಿನಂತ ಮಾತು
ಅನ್ನಿಸುತ್ತದೆ ಕತ್ತಲಾಗದಿರಲಿ ಇ ಹೊತ್ತು ....

ಈ ಪಠೄ ಪುಸ್ತಕದ ಸುತ್ತ ಪ್ರೇಮ ಪತ್ರ
ಕಾರಣ ನನ್ನ ಮನದ ದಾರಿ ತುಂಬಾ ನಿನ್ನದೇ

ಬಿತ್ತಿ ಚಿತ್ರ ............. ........

ಬುಧವಾರ, ಫೆಬ್ರವರಿ 16, 2011

ನಾಡಿನಲ್ಲಿ ಗೂಡು ಇಲ್ಲದಾಗಿತ್ತು .......


ಕಾಡ ನಾಡಿನಲ್ಲಿ ಆ ಜೋಡಿ ಹಕ್ಕಿಗಳು
ಕಳಯೂತಿದ್ದವು ಕಲೆತು ದಿನಗಳ ......

ಮತ್ತ್ಯಾಕೋ ಅಂದು ಬಂದಿತ್ತು ಗತ್ತು
ಮೊದಲ ಹಕ್ಕಿ ಹಾರುತಿದೆ ಅತ್ತ
ಇತ್ತ ಸುತ್ತ ಮುತ್ತ ..........

ಇನ್ನಸ್ಟು ಕಾಳು ಹೆಕ್ಕುವ ತವಕದತ್ತ.....
ಮತ್ತೆ ಕಾಣುತಿದೆ ಬಯಲು ದಾರಿ ಅತ್ತ .......

ಅದೇನೋ ಯಾಕೋ ಹೆಚ್ಚು ಕೂಳ ಕೂಡಿರುವ ಆಸೆ
ಮತ್ತಷ್ಟು ದೂರ ಮತ್ತಷ್ಟು ದೂರ ಹಾರುತಿದೆ
ಗೂಡ ಬಿಟ್ಟು ಬಲು ದೂರ ......

ತಿರುಗಿ ನೋಡಲೇ ಇಲ್ಲ ಮರೆತಿರುವ ನಾಡ
ಮತ್ತಾರು ಇರಲಿಲ್ಲ ಅದರ ಸಂಗಡ........

ಕಾಳೆನೋ ಸಿಕ್ಕಿತ್ತು ಒಂಟಿ ಹಕ್ಕಿ ಎದಯಲಿ ನೋವಿತ್ತು
ಮತ್ತೆ ಗೂಡ ಸೇರುವ ತವಕದಲ್ಲಿ ಅದು ಇತ್ತು ..........

ಬಂದ ಹಾದಿಯಲಿ ಸಾಗಿತ್ತು
ಆದರಲ್ಲಿ ನಿರಾಶೆ ಕಾದಿತ್ತು.........

ಕಾಡ ನಾಡಿನಲ್ಲಿ ಗೂಡು ಇಲ್ಲದಾಗಿತ್ತು
ಕಳೆದ ಸಿಹಿ ಗಳಿಗೆಯ ನೆನಪಾಗಿ
ಹಕ್ಕಿ ಮತ್ತೆ ಮತ್ತೆ ಬಿಕ್ಕಿ ಅತ್ತಿತ್ತು
ಹಕ್ಕಿ ಮತ್ತೆ ಬಿಕ್ಕಿ ಅತ್ತಿತ್ತು.........

ಮಂಗಳವಾರ, ಫೆಬ್ರವರಿ 8, 2011

ಬಾಲ್ಯದ ನೆನಪುಗಳನೆಲ್ಲ ಹಂಚಿ ಕೊಂಡು


ಅಪ್ ಸ್ಟಂಪ್ ನ ನೇರ ಬರುತ್ತಿದ್ದ ಚೆಂಡಿನ ದಿಕ್ಕನ್ನು ತನ್ನ ಬ್ಯಾಟಿನ ಮೂಲಕ ಲೆಗ್ ಸೈಡಿಗೆ ಗೆ ತಿರುಗಿಸಿ ಸಿಕ್ಸ್ಆಗಿ ಮಾರ್ಪಡಿಸುತಿದ್ದ ಅ ನನ್ನ ಗೆಳೆಯ ತನ್ನ ಬದುಕಿನ ಗತಿಯನ್ನೇ ತಿರುಗಿಸಿ ಕೊಳ್ಳುತ್ತಾನೆ ಎಂದು ನಾ ಎಣಿಸಿರಲಿಲ್ಲ ..ಇ ಬದುಕೇ ಹೀಗೆ ನಾವೇ ನಾವಿಕರಾಗುತ್ತೇವೆ ಮನಸಿನ ಕೈಗೆ ಬುದ್ದಿಯನ್ನು ಕೊಟ್ಟು ಸುಮ್ಮನಿದ್ದರೆ ನಾವೆಲ್ಲೋ ಸುಳಿಗೆ ಸಿಕ್ಕಿ ಬದುಕಿನ ಸುಂದರ ಕತೆಯನ್ನು ದುಖಂತದೊಂದಿಗೆ ಕೊನೆಗೊಳಿಸುತ್ತೇವೆ....
೫ರಲ್ಲಿ ನನ್ನ ಬೆಂಚಿಗೆ ಬಂದ ಆ ಕಪ್ಪು ಬಣ್ಣದ ನನ್ನ ಗೆಳೆಯ ಬಹಳ ಚುರುಕಾಗಿದ್ದ ..ತನ್ನ ಸುಂದರ ಅಕ್ಷರದಿಂದ ಬರಯೂತಿದ್ದ ಅವನು ನನಗೆ ಬಲು ಅಚ್ಚು ಮೆಚ್ಚು ...ತನ್ನ ಮನೆಯ ಮತ್ತು ಮನದ ಕತೆಗಳನ್ನು ನನ್ನೊಂದಿಗೆ ತೆರೆದಿದುತಿದ್ದ ಅವನು ಮಾತಿನ ಮಲ್ಲನಾಗಿದ್ದ ...ಸದಾ ಹಸನುಖಿಯಾದ ಅವನಿಗೆ ಕ್ರಿಕೆಟ್ನಲ್ಲಿ ಎಲ್ಲಿಲ್ಲದ ಆಸಕ್ತಿ ..ಆಟದ ಬಿಲ್ಲಆಯಿತು ಎಂದರೆ ನಾವೆಲ್ಲ ಕ್ರಿಕೆಟ್ ಆಡಲು ರೆಡಿಯಗುತಿದ್ದೆವು..ನಮ್ಮೊಳಗೇ ಟೀಂ ಮಾಡಿಕೊಳ್ಳುತಿದ್ದೆವು ...ಅಸ್ತು ಚೆನ್ನಾಗಿ ಆಡಲು ಬರದ ನಾನು ಯಾವಾಗಲು ನನ್ನ ಪ್ರೀತಿಯ ಗೆಳೆಯನ ಟೀಮ್ನ ಪಾಲಗುತಿದ್ದೆ ...ಅಂತು ಇಂತೂ ಬಹಳ ಕಷ್ಟ ಪಟ್ಟು ೭ನೆ ತರಗತಿ ಪಾಸಾದ ನಾವು ಹೈಸ್ಕುಲಗೋಸ್ಕರ ಬೇರೆ ಬೇರೆ ಹೈಸ್ಕೂಲ್ ಸೇರಿದರೆ ನನ್ನ ಗೆಳೆಯ ತನ್ನ ವಿದ್ಯಬ್ಯಾಸಕ್ಕೆ ವಿದಾಯ ಹೇಳಿ ಮನೆಯ ಬಡತನದ ಶಿಕ್ಷೆ ಎಂಬಂತೆ ಹೋಟೆಲು ಕೆಲಸಕ್ಕಾಗಿ ಬೆಂಗಳೂರು ಸೇರಿದ್ದ
ಮತ್ತೆ ಎಂದು ಬೇಟಿಯಾಗದ ನಾವು ಹದಿನಾಲ್ಕು ವರುಷಗಳ ನಂತರ ಅವನನ್ನು ನೋಡುವ ಅವಕಾಶ ಒದಗಿ ಬಂತು ಆ ದಿನ ನಾ ಊರಿಗೆ ಹೋದಾಗ ನನ್ನ ಮತ್ತೊಬ್ಬ ಸ್ನೇಹಿತನೊಬ್ಬನಿಂದ ಆ ನನ್ನ ಬಾಲ್ಯದ ಗೆಳೆಯ ಉರಿನಲ್ಲಿರುವುದು ತಿಳಿಯಿತು ಮತ್ತೆ ಅರೆ ಕ್ಷಣದಲ್ಲಿ ಅವನ ಬಾಯಿಂದಲೇ ಆಘಾತದ ಸುದ್ದಿಯು ಸಹ ಹೊರ ಬಿತ್ತು..ನನ್ನ ಜೀವದ ಗೆಳೆಯ ವಾಸಿಯಾಗದ ಖಾಯಿಲೆ ಒಂದಕ್ಕೆ ಬಲಿಯಾಗಿದ್ದ ಅದು ಮಹಾ ಮಾರಿ ಎಡ್ಸ್ ಅಂದು ತಿಳಿದಾಗ ಒಮ್ಮೆ ಶಾಕ್ ಅದವನತೆ ನಿಂತು ಬಿಟ್ಟೆ ...
ಕೆಲಸಕ್ಕಾಗಿ ಉರು ಬಿಟ್ಟ ಗೆಳೆಯ ಹೋಟೆಲಿನಲ್ಲಿ ಕೆಲಸ ಮಾಡಿ ನಂತರದ ದಿನಗಳಲ್ಲಿ ಅವನೇ ಸ್ವತಹ ಹೋಟೆಲನ್ನು ತೆರೆದಿದ್ದ ..ಕ್ರಮೇಣವಾಗಿ ಅದ್ರಲ್ಲಿ ಯಶಸ್ಸನ್ನು ಸಾದಿಸಿದ ...ದಿನ ಕಳೆದಂತೆ ಕುಡಿದಂತ ವ್ಯಸನಕ್ಕೆ ಬಿದ್ದು ಕೆಟ್ಟ ಚಟಗಳ ದಾಸನಾಗಿದ್ದ........
ಅವನನ್ನು ನೋಡಬೇಕು ಅವನೊಂದಿಗೆ ಮಾತನಾಡಬೇಕು ನಾವಿಬ್ಬರು ಮಾಮೂಲಾಗಿ ಕುರುತಿದ್ದ ಅ ಮರದ ಕೆಳಗೆ ಕುಳಿತು ಬಾಲ್ಯದ ನೆನಪುಗಳನೆಲ್ಲ ಹಂಚಿ ಕೊಂಡು ನಗಬೇಕು...ಎನ್ನುತಿದ್ದ ನನಗೆ ಅದಕ್ಕೆ ವಿರುದ್ದವಾದ ಸನ್ನಿವೇಶವನ್ನು ಸೃಸ್ಟಿಸಿದ್ದ ಆ ಬಗವಂತ.....ಮತ್ಯಾಕೆ ಆ ನೀಲಿ ಕಂಗಳ ಹುಡುಗ ತಪ್ಪನ್ನು ಮಾಡಿದ ತನ್ನ ಜೀವನದ ಚಿಗುರನ್ನೇ ಕತ್ತರಿಸಿ ಕೊಂಡಿದ್ದ..ಅದ್ಯಾಗೋ ಬಾರವಾದ ಮನಸಿಂದ ಅವನನ್ನು ನೋಡ ಹೋದ ನನಗೆ ಅವನ ತಾಯಿಯ ಕಣ್ಣಿರುಗಳ ದರ್ಶನವಾಗಿತ್ತು ...ಅವರೊಡನೆ ಆತ ಎಲ್ಲಿ ಎಂದು ಕೇಳಿದಾಗ ಅವನು ಮನೆಯ ಬದಿ ಕೋಣೆಯಲ್ಲಿ ಇರುದಾಗಿ ತಿಳಿದು ಬಂತು ಮತ್ತು ಅವನು ಯಾರನ್ನು ನೋಡಲು ಇಷ್ಟ ಪಡುದಿಲ್ಲ ಎನ್ನುದು ಸಹ ...
ಮೌನಿಯಾಗಿ ಮನೆಗೆ ಹೋರಾಟ ನನಗೆ ಅದೇ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತಿದ್ದ ಹುಡುಗರ ದಂಡು ನನ್ನನು ನೋಡಿ ನಗುತಿದ್ದಂತೆ ಬಾಸವಾಯಿತು
(ಕಾಲ್ಪನಿಕ )

ಭಾನುವಾರ, ಫೆಬ್ರವರಿ 6, 2011

ಹೃದಯದ ಮಾತು ಕೆಳಬೇಕಂತೆ


ಗೆಳತಿ ನಿನ್ನ ಮೇಲೆ ನನಗ್ಯಾಕೋ ಗೊತ್ತಿರದ ಬಾವ ...ಮತ್ತಿನ್ನೇನೋ ಕರೆಯಲಿ ಪ್ರೀತಿ ಅನ್ನಬೆಕಸ್ಟೇ ...ನೀನು ಕೇಳಬಹುದಲ್ಲವೆ ನಿನ್ನನು ಪ್ರೀತಿಸಲು ಕಾರಣ ...ಅ ಕಾರಣಗಳಿಲ್ಲದೆ ಹುಟ್ಟಿದ್ದರಿಂದ ಇದಕ್ಕೆ ಪ್ರೀತಿ ಅಂದು ಕರೆದಿರಬೇಕು .....ಮೊನ್ನೆ ಮಳೆಗಾಲದ ಮಳೆಯಲ್ಲಿ ನೆನೆದು ಆಫೀಸಿನ ಕಸ್ಟಮರ್ ಕ್ಯಾರೆನಲ್ಲಿ ಕುಳಿತಾಗ ಅನಿರಿಕ್ಷಿತವಾಗಿ ಬಂದ ನಿನ್ನ ಆಗಮನ ಅದೇಷ್ಟು ಹಿತವಾಗಿತ್ತು ಗೊತ್ತ ......ನಿನ್ನ ಹೆಜ್ಜೆಯ ಸದ್ದುಗಳು ಮಾತ್ರ ಸಾಕು ನನ್ನ ಮನ ಪುಟ್ಟ ಮಗುವಿನಂತ್ತಾಗಲು ....ಪ್ರೀತಿಯಂದರೆ ಹಾಗೆ ಹೀಗೆ ಅಂದು ಬಾಷಣ ಬಿಗಿತಿದ್ದ ನನಗೆ ...ಅವುಗಳೆಲ್ಲವೂ ಸುಳ್ಳು ಅನ್ನಿಸತೊಡಗಿದೆ ...ಪ್ರೀತಿಗೆ ಬಾಷೆಗಲಿಲ್ಲ ಬರಹಗಳಿಲ್ಲ ....ಪ್ರೀತಿ ಹೃದಯಗಳ ಮಾತುಗಳು ಎನ್ನಬಹುದೇನೋ ಓ ಗೆಳತಿ ಕೆಲವೊಂದು ಸಲ ಹೃದಯದ ಮಾತು ಕೆಳಬೇಕಂತೆ...ಹೌದು ನಾನೀಗ ನನ್ನ ಹೃದಯದ ಮಾತು ಕೇಳುತ್ತಾ ಇದ್ದೀನಿ ಅನ್ಸುತ್ತೆ .... ನಿನಗೆ ನೆನಪಿದೆಯ ಆ ದಿನ ಸಂಜೆ ಬಸ್ ಸ್ಟ್ಯಾಂಡ್ನಲ್ಲಿ ಮುದುಕಿನ ರೋಡ್ ದಾಟಿಸಲು ಹೆಲ್ಪ್ ಮಾಡ್ತಾ ಇದ್ದೀಯಲ್ಲ ಅವಾಗಲೇ ನಿ ನನ್ನ ಹೃದಯಕ್ಕೆ ಇಷ್ಟ ಆಗಿದ್ದಿಯ ಕಾಣೆ ..ಸದಾ ಕೆಲಸದಲ್ಲಿ ತಲ್ಲಿನವಾಗಿ ತನ್ನ ಲೋಕಾನೆ ಮರೆವ ಹುಡುಗಿ ನೀನೇಕೆ ಯಾವಾಗಲು ಮೌನವನ್ನೇ ಇಷ್ಟ ಪಡ್ತಿಯಾ ....ಈಗ ನಾನು ಎಲ್ಲರಿಗಿಂತ ಮೊದಲೇ ಅಪಿಸಿಗೆ ಬರ್ತೀನಿ ಯಾಕೆ ಗೊತ್ತ ನಿನ್ನ ಬರುವಿಕೆಯನ್ನು ಕಾಯುವ ಜಾತಕ ಪಕ್ಷಿ ನಾನು..ಹೇ ಹುಡುಗಿ ನನ್ನ ಮನದ ತುಂಬಾ ನಿನ್ನದೇ ಕವಿತೆ...ಮತ್ತೆ ಮತ್ತೆ ನಿ ನನ್ನ ಎದುರು ಹಾದು ಹೋದಾಗ ನನ್ನ ಎದೆಯ ಬಡಿತ ನಿನಗೆ ಕೇಳಿಸಬಹುದೇನೋ ಅನ್ನುತ್ತ ನನ್ನಲ್ಲಿ ನಾನೇ ಮಾತಾಡಿಕೊಳುತ್ತೇನೆ...ನೀನಿದ್ದರಸ್ಟೇ ಸಾಕು ಈ ದಿನಗಳೆಲ್ಲ ಹಬ್ಬಗಳಂತೆ ಅನ್ನಿಸುತ್ತದೆ.....
ಅದ್ಯಾಕೋ ಗೊತ್ತಿಲ್ಲ ಕಾಣೆ ನಾನೀಗ ನನ್ನ ಎಲ್ಲ ಆಫೀಸಿನ ಕೆಲಸಗಳನ್ನು ಚೆನ್ನಾಗಿ ಮಾಡುತಿದ್ದೇನೆ ....ಬೆಳ್ಳು ಬೆಳಗಾದೊಡನೆ ನನ್ನವಳು ಚೆನ್ನಗಿರಲೆಂದು ಬಯಸುತ್ತೇನೆ .....ಈಗಿನ ಎಲ್ಲ ದಿನಗಳನ್ನು ನಾನು ಸಂಬ್ರಮಿಸುತಿದ್ದೇನೆ ..ಕವಿಯೊಬ್ಬ ಹೇಳುತ್ತಾನೆ "ಕುಂತರು ನಿಂತರು ನಿಂದೆ ದ್ಯಾನ ಮನಕಿಲ್ಲ ಸಮಾದಾನ" ಹಾಗೆ ಆಗಿ ಬಿಟ್ಟಿದೆ ಕಾಣೆ ನನ್ನ ಮನಸು ...
ಮತ್ತೆ ಮತ್ತೆ ನೀನ್ಯಾಕೆ ನನ್ನ ಮನಸ್ಸಿನಲ್ಲಿ ಕಾಡುತ್ತಿಯ ನಿನ್ನಲ್ಯಾಕೆ ನನ್ನಲ್ಲಿ ಒಲವು ..ಇ ವಾಸಿಯಾಗದ ಹೃದಯಾ ಬೇನೆಗೆ ಪ್ರೀತಿಯೇ ಔಷದವಂತೆ ...ನನ್ನೊಲವಿನ ಗೆಳತಿ ಮನಸಾರೆ ನಿನ್ನನ್ನು ಪ್ರೀತಿಸುತ್ತಿದ್ದೇನೆ
ನಿನ್ನ ಹೃದಯದ ಮಾತಿಗಾಗಿ ಕಾದಿರುವ
ಮೌನಿ

ಬುಧವಾರ, ಫೆಬ್ರವರಿ 2, 2011

LAMBORGHINI...............











ಒಂದು ಅಥವಾ ಎರಡು ವರ್ಷಗಳ ಹಿಂದೆ ಇರಬಹುದು ನಮ್ಮ ಮಂಗಳೂರಿನ ಬೆಡಗಿ ಹಿಂದಿ ಸಿನಿಮಾ ತಾರೆ ಶಿಲ್ಪ ಶೆಟ್ಟಿಗೆ ಅವಳ ಪ್ರಿಯಕರ ರಾಜ ಕುಂದ್ರನಿಂದ LAMBORGHINI ( ಎರಡು ಕೋಟಿ ಅರವತ್ತು ಸಾವಿರ ಅಂದಾಜು ) ಕಾರು ಉಡುಗೊರೆಯಾಗಿ ಕೊಟ್ಟ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿ ಆಗಿತ್ತು ..Automobile ಜಗತ್ತಿನಲ್ಲಿ ಮಿಂಚುತ್ತಿರುವ ಕಾರದು...ಒಂದೇ ಮಾತಿನಲಿ automobile queen ಎಂದಸ್ತೆ ಹೇಳಬಹುದೇನೋ ...ಇ ಕಾರು Ferruccio Lamborghini ಎನ್ನುವ ಇಟಲಿಯ ಇಂಜಿನಿಯರ್ ಒಬ್ಬನ ಕನಸಿನ ಕೂಸದು ೧೯೧೬ರಲ್ಲಿ ಇಟಲಿಯಲ್ಲಿ ಈತನ ಜನನವಾಯಿತು ...ಎರಡನೆಯ ಮಾಹಯುದ್ದದಲಿ ಅಲ್ಲಿನ ಎಲ್ಲರಂತೆ ಇತ ಸೇನಾಪಡೆಗೆ ಸೇರಬೇಕಾಗಿ ಬಂತು ..ಯುದ್ದ ಸಂದರ್ಬದಲ್ಲಿ ಹಾಳಗುತಿದ್ದ truck ,ಕಾರುಗಳನ್ನ ಅದೇ ಸ್ತಳದಲ್ಲಿ ರಿಪೇರಿ ಮಾಡಿ ಸೈನಿಕರಿಗೆ ನೆರವಾಗುದು ಈತನ ಕೆಲಸವಾಗಿತ್ತು ...ಆದರಲ್ಲಿ ಅಪಾರ ಪರಿಣಿತಿಯನ್ನು ಪಡೆದ ಇತ ಕೆಲವೇ ಸಮಯಗಳಲ್ಲಿ ಬಲು ಬೇಡಿಕೆಯ ಇಂಜಿನಿಯರ್ ಆಗಿ ಹೊರಹೊಮ್ಮಿದ ...ಅದ್ಯಾಗೋ ಎರಡನೆಯ ಮಹಾಯುದ್ದದ ನಂತರ ಆತನ ತವರೂರಾದ ಉತ್ತರ ಇಟೆಲಿಯಲ್ಲಿ ಒಂದು ಕಾರ ಮೋಟೊರ್ ಸೈಕಲ್ ರಿಪೈರ್ ಅಂಗಡಿಯನ್ನು ಪ್ರಾರಂಬಿಸಿದ ..ಕ್ರಮೇಣವಾಗಿ tractor ನ್ನು ತಯಾರಿಸುವಲ್ಲಿ ತನ್ನ ಉತ್ಸಹವನ್ನು ತೋರಿಸಿದ ಮತ್ತು ಅವನ ಸತತ ಪರಿಶ್ರಮದಿಂದ ಅದರಲ್ಲಿ ಯಶಸ್ಸನ್ನು ಸಾದಿಸಿದ ...ಅ ದಿನಗಳಲ್ಲಿ ಇಟಲಿಯಾ ಅರ್ಥಿಕ ವ್ಯವಸ್ತೆ ಏರು ಗತಿಯಲ್ಲಿ ಸಾಗಿತ್ತು ...ಆಗ ಅವನ ಬಳಿ ಇದ್ದ ಬೆಲೆ ಬಾಳುವ ಪೆರಾರಿ mesararti ಕಾರುಗಳು ಕೆಲವೊಂದು ಸಮಯದಲ್ಲಿ ತಾಂತ್ರಿಕ ತೊಂದರೆಗಳಿಗೆ ಒಳಗಾಗುತಿದ್ದವು ಮತ್ತು ಅದರ (ಪೆರಾರಿ 258 ) ರಿಪೇರಿಗಾಗಿ ಅಲ್ಲಿಯೇ ಇದ್ದ ಪೆರಾರಿ ಉತ್ಪಾದನ ಕಾರ್ಖಾನೆಗೆ ಕೊಂಡು ಹೋಗಿದ್ದ ಆದರೆ ಬೇರೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದ enzo ferrari (founder of the ferrari )ಈತನನ್ನು ಅಲಕ್ಷಿಸಿದ್ದ ..ಅದರಿಂದ ಬೇಸತ್ತ Ferruccio Lamborghini ಪೆರಾರಿಗೆ ಸವಾಲನ್ನುವಂತೆ v12engine ತಯಾರಿಕೆಗೆ ತೊಡಗಿದ ಮತ್ತೆ ಅವನೊಂದಿಗೆ Giampaolo Dallara (who had previously worked on a Ferrari )ಕೈ ಜೋಡಿಸಿದ್ದ ಕೊನೆಗೋ ೧೯೬೩ ರ turino ಆಟೋ ಶೋವ್ನಲ್ಲಿ ಅವನ ಪ್ರಥಮ 350 GTV ಬಹಳ ಜನ ಮನ್ನಣೆಯನ್ನು ಗಳಿಸಿತ್ತು ..ಮತ್ತು ಆತನ ಹೆಸರನ್ನೇ ಆ ಕಾರಿಗೆ ಇಡಲಾಯಿತು ...ಒಮ್ಮೆ ನೋಡಿದರೆ ಇನೊಮ್ಮೆ ನೋಡಬೇಕೆನ್ನುವ ಅದರ ಬಾಡಿ structure ,ಇಂಜಿನ್ ಪವರ್ ಇಂದಿಗೂ ತನ್ನ ಹೆಸರನ್ನು ಕಾಪಾಡಿಕೊಂಡಿದೆ ....ಒಂದು ವರದಿಯ ಪ್ರಕಾರ ನಮ್ಮ ಬಾರತದಲ್ಲಿ ಎಂಟರಿಂದ ಹತ್ತು ಲಮ್ಬೋರ್ಗ್ಹಿನಿ ಕಾರುಗಳು ಇದೆಯಂತೆ .... lamborghiniಯ clutch ಖರೀದಿಸಲು ಬಂದ ಗ್ರಾಹಕರೋಬ್ಬರೊಂದಿಗೆ ಹಂಚಿಕೊಂಡ ಹರಟೆಯನ್ನು ಹೀಗೆ ಟೈಮ್ ಪಾಸಗೆ ಬರಹ ರೂಪಕ್ಕಿಳಿಸಲಾಯಿತು...ಅಂದ ಹಾಗೆ ಆ ಕಾರಿನ clutch ನ ಬೆಲೆ ಬರಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು .....ಅಸ್ಟೊಂದು ಹಣ ಕೊಟ್ಟು ಕಾರು ಖರೀದಿಸುವ ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ ಸ್ವಾಮಿ ಆದರೆ ಆ ಪೋಂಕ ಶಿಲ್ಪನ ಹೆಣ್ಣಿನ ಹಿಂದೆ ಬಿದ್ದ ರಾಜ ಕುಂದ್ರನಿಗಂತೂ ಮಂಡಿ ಸಮ ಇಲ್ಲ ಅಕ.......................