ಪುಟಗಳು

ಭಾನುವಾರ, ಫೆಬ್ರವರಿ 6, 2011

ಹೃದಯದ ಮಾತು ಕೆಳಬೇಕಂತೆ


ಗೆಳತಿ ನಿನ್ನ ಮೇಲೆ ನನಗ್ಯಾಕೋ ಗೊತ್ತಿರದ ಬಾವ ...ಮತ್ತಿನ್ನೇನೋ ಕರೆಯಲಿ ಪ್ರೀತಿ ಅನ್ನಬೆಕಸ್ಟೇ ...ನೀನು ಕೇಳಬಹುದಲ್ಲವೆ ನಿನ್ನನು ಪ್ರೀತಿಸಲು ಕಾರಣ ...ಅ ಕಾರಣಗಳಿಲ್ಲದೆ ಹುಟ್ಟಿದ್ದರಿಂದ ಇದಕ್ಕೆ ಪ್ರೀತಿ ಅಂದು ಕರೆದಿರಬೇಕು .....ಮೊನ್ನೆ ಮಳೆಗಾಲದ ಮಳೆಯಲ್ಲಿ ನೆನೆದು ಆಫೀಸಿನ ಕಸ್ಟಮರ್ ಕ್ಯಾರೆನಲ್ಲಿ ಕುಳಿತಾಗ ಅನಿರಿಕ್ಷಿತವಾಗಿ ಬಂದ ನಿನ್ನ ಆಗಮನ ಅದೇಷ್ಟು ಹಿತವಾಗಿತ್ತು ಗೊತ್ತ ......ನಿನ್ನ ಹೆಜ್ಜೆಯ ಸದ್ದುಗಳು ಮಾತ್ರ ಸಾಕು ನನ್ನ ಮನ ಪುಟ್ಟ ಮಗುವಿನಂತ್ತಾಗಲು ....ಪ್ರೀತಿಯಂದರೆ ಹಾಗೆ ಹೀಗೆ ಅಂದು ಬಾಷಣ ಬಿಗಿತಿದ್ದ ನನಗೆ ...ಅವುಗಳೆಲ್ಲವೂ ಸುಳ್ಳು ಅನ್ನಿಸತೊಡಗಿದೆ ...ಪ್ರೀತಿಗೆ ಬಾಷೆಗಲಿಲ್ಲ ಬರಹಗಳಿಲ್ಲ ....ಪ್ರೀತಿ ಹೃದಯಗಳ ಮಾತುಗಳು ಎನ್ನಬಹುದೇನೋ ಓ ಗೆಳತಿ ಕೆಲವೊಂದು ಸಲ ಹೃದಯದ ಮಾತು ಕೆಳಬೇಕಂತೆ...ಹೌದು ನಾನೀಗ ನನ್ನ ಹೃದಯದ ಮಾತು ಕೇಳುತ್ತಾ ಇದ್ದೀನಿ ಅನ್ಸುತ್ತೆ .... ನಿನಗೆ ನೆನಪಿದೆಯ ಆ ದಿನ ಸಂಜೆ ಬಸ್ ಸ್ಟ್ಯಾಂಡ್ನಲ್ಲಿ ಮುದುಕಿನ ರೋಡ್ ದಾಟಿಸಲು ಹೆಲ್ಪ್ ಮಾಡ್ತಾ ಇದ್ದೀಯಲ್ಲ ಅವಾಗಲೇ ನಿ ನನ್ನ ಹೃದಯಕ್ಕೆ ಇಷ್ಟ ಆಗಿದ್ದಿಯ ಕಾಣೆ ..ಸದಾ ಕೆಲಸದಲ್ಲಿ ತಲ್ಲಿನವಾಗಿ ತನ್ನ ಲೋಕಾನೆ ಮರೆವ ಹುಡುಗಿ ನೀನೇಕೆ ಯಾವಾಗಲು ಮೌನವನ್ನೇ ಇಷ್ಟ ಪಡ್ತಿಯಾ ....ಈಗ ನಾನು ಎಲ್ಲರಿಗಿಂತ ಮೊದಲೇ ಅಪಿಸಿಗೆ ಬರ್ತೀನಿ ಯಾಕೆ ಗೊತ್ತ ನಿನ್ನ ಬರುವಿಕೆಯನ್ನು ಕಾಯುವ ಜಾತಕ ಪಕ್ಷಿ ನಾನು..ಹೇ ಹುಡುಗಿ ನನ್ನ ಮನದ ತುಂಬಾ ನಿನ್ನದೇ ಕವಿತೆ...ಮತ್ತೆ ಮತ್ತೆ ನಿ ನನ್ನ ಎದುರು ಹಾದು ಹೋದಾಗ ನನ್ನ ಎದೆಯ ಬಡಿತ ನಿನಗೆ ಕೇಳಿಸಬಹುದೇನೋ ಅನ್ನುತ್ತ ನನ್ನಲ್ಲಿ ನಾನೇ ಮಾತಾಡಿಕೊಳುತ್ತೇನೆ...ನೀನಿದ್ದರಸ್ಟೇ ಸಾಕು ಈ ದಿನಗಳೆಲ್ಲ ಹಬ್ಬಗಳಂತೆ ಅನ್ನಿಸುತ್ತದೆ.....
ಅದ್ಯಾಕೋ ಗೊತ್ತಿಲ್ಲ ಕಾಣೆ ನಾನೀಗ ನನ್ನ ಎಲ್ಲ ಆಫೀಸಿನ ಕೆಲಸಗಳನ್ನು ಚೆನ್ನಾಗಿ ಮಾಡುತಿದ್ದೇನೆ ....ಬೆಳ್ಳು ಬೆಳಗಾದೊಡನೆ ನನ್ನವಳು ಚೆನ್ನಗಿರಲೆಂದು ಬಯಸುತ್ತೇನೆ .....ಈಗಿನ ಎಲ್ಲ ದಿನಗಳನ್ನು ನಾನು ಸಂಬ್ರಮಿಸುತಿದ್ದೇನೆ ..ಕವಿಯೊಬ್ಬ ಹೇಳುತ್ತಾನೆ "ಕುಂತರು ನಿಂತರು ನಿಂದೆ ದ್ಯಾನ ಮನಕಿಲ್ಲ ಸಮಾದಾನ" ಹಾಗೆ ಆಗಿ ಬಿಟ್ಟಿದೆ ಕಾಣೆ ನನ್ನ ಮನಸು ...
ಮತ್ತೆ ಮತ್ತೆ ನೀನ್ಯಾಕೆ ನನ್ನ ಮನಸ್ಸಿನಲ್ಲಿ ಕಾಡುತ್ತಿಯ ನಿನ್ನಲ್ಯಾಕೆ ನನ್ನಲ್ಲಿ ಒಲವು ..ಇ ವಾಸಿಯಾಗದ ಹೃದಯಾ ಬೇನೆಗೆ ಪ್ರೀತಿಯೇ ಔಷದವಂತೆ ...ನನ್ನೊಲವಿನ ಗೆಳತಿ ಮನಸಾರೆ ನಿನ್ನನ್ನು ಪ್ರೀತಿಸುತ್ತಿದ್ದೇನೆ
ನಿನ್ನ ಹೃದಯದ ಮಾತಿಗಾಗಿ ಕಾದಿರುವ
ಮೌನಿ

ಕಾಮೆಂಟ್‌ಗಳಿಲ್ಲ: