ಪುಟಗಳು

ಭಾನುವಾರ, ಡಿಸೆಂಬರ್ 12, 2010



ಮತ್ತದೇ ಸೂರ್ಯ ಹುಟ್ಟುತಾನೆ ಅದೇ ರಾತ್ರಿ ಅದೇ ಮುಂಜಾನೆ .....ನೋವು ನಿರಾಶೆ ಉತ್ಸಹಾ ಪ್ರಿತಿಗಳೆಲ್ಲವೂ ಇ ಕಳೆದ ಹಳೆಯ ವರುಷದ ನೆನಪುಗಳಸ್ತೆ .....ನೋಡುನೋಡುತಿದ್ದಂತೆ ಮರೆಯಾಗುವ ಸಂಜೆಯಾ ನೆಸರನಂತೆ ಕಳೆದ ವರುಶವೊಂದು ಕಳೆದು ಬಿಟ್ಟಿದೆ .....ಮತ್ತಿಪ್ಪೖದರಲ್ಲಿ ಐದರ ನೆನಪುಗಳು ಕಾಡುತ್ತವೆ



ಬಿಟ್ಟಿರಲಾಗದ ಪ್ರೀತಿ,ಆ ಶಾಲಾ ದಿನಗಳು ...ಇರುವೆಗಳಂತೆ ಸದಾ ಚಟುವಟಿಕೆಯಿಂದಿರುವ ಅ ಸಮಯಗಳು ....ನಮ್ಮನ್ನು ಪ್ರಿತಿಸುತಿದ್ದ ಹೊಗಳುತಿದ್ದ ನಮ್ಮೊಂದಿಗೆ ಸ್ನೇಹಿತನಾಗುತಿದ್ದ ಮಾಸ್ತರ ಪಾಠ ಗಳನಸ್ತೆ ಚೆನ್ನಾಗಿ ಓದುತಿದ್ದ ಶಾಲಾ ದಿನಗಳು……



ಪಕ್ಕದ ಮನೆಯ ಗಿಡ ಕದ್ದು ಶಾಲೆಯಲ್ಲಿ ನೆಟ್ಟು ವನಮೊತ್ಶವ ಮಾಡಿದ್ದು ,ನಾನು ನನ್ನ ಸ್ನೇಹಿತರು ಸೇರಿ ಕದಿಯುತಿದ್ದ ಕರಗುಂಜಿ ,ಹಲಸಿನ ಹಣ್ಣು ನಾವೆಲ್ಲರೂ ಮಾಡುತಿದ್ದ ಹತ್ತು ಹಲವಾರು ತರಲೆಗಳು ........ಮಧ್ಯಾನದ ಸುಡು ಬಿಸಿಲೆನ್ನದೆ ಆಡುತಿದ್ದ ಕ್ರಿಕೆಟ್ ಆಟ ..ಸಂಜೆತನಕ ಕೆರೆಯಲ್ಲಿ ಇಜಾಡಿ ಗಾಳದಲ್ಲಿ ಮೀನು ಹಿಡಿಯ್ತಿದ್ದ ಅ ಹೊಳೆ ....ಪಕ್ಕದ ಇಟ್ಟಿಗೆ ಕಾರ್ಖಾನೆಯಿಂದ ಇಟ್ಟಿಗೆ ಕದ್ದು ಮಾಡಿದ ಮುರಡಿಯ ರಾಮ ಮಂದಿರ.....ಎಲ್ಲವು ಕಳೆದ ಹೋದ ವರುಷಗಳ ಪುಟದೊಳಗೆ .......

ಮತ್ತೆ ಮುಂಜಾನೆಯ ನಾಲ್ಕಕ್ಕೆದ್ದು ಹೊಲ ಉಳಿ ...ಬೆಳಗಿನ ತಿಂಡಿ ತಿಂದು ಕಾಲೇಜಿನ uniform ದರಸಿ… ಮತ್ತೆ ಮತ್ತೆ ಕನ್ನಡಿಯಲ್ಲಿ ಮುಖ ನೋಡಿ ತೀಡಿ ತಿದ್ದಿ ಬಾಚುತಿದ್ದ ತಲೆಕೂದಲು ...ಹೀರೋ ಎಂದು ನಾಮಕಿತಗೊಂಡ ನನ್ನ ಮುದ್ದಿನ ಸೈಕಲ್ ಏರಿ ಹೋಗುವ ನನ್ನ ಜಾಪು ....ಮತ್ತಲ್ಲಿ ಮುಂದಿನ ಬೆಂಚಿನ ಹುಡುಗಿಯ ಚೆಂದ ......Wow…ಅ ದಿನಗಳ ಮಜಾವೇ ಬೇರೆಯಾಗಿರುತ್ತಿತ್ತು



ಹೇಳುತ್ತಾ ಹೋದರೆ ಇನ್ನಸ್ಟು ಇದೆ ...ಮನಸುಗಳು ಮತ್ತದೇ ನೆನಪುಗಳ ನಡುವೆ ಸುತ್ತಿ ಗಿರಕೆ ಹೊಡಯುತ್ತದೆ...ಮತ್ತಿನೆರಡು ದಿನಗಳಲ್ಲಿ ಇ ವರುಷವು ಜಾರಿ ಹೋಗಲಿದೆ ....ಕ್ರಿಕೆಟ್ ದೇವ ಸಚ್ಚಿನ್ ಹೊಡೆದ ದ್ವಿಶತಕ ....ಚಿನ್ನದ ಹುಡುಗಿ ಅಶ್ವಿನಿ ಗೆದ್ದ ಮೂರು ದಾಖಲೆಯ ಪದಕಗಳು....ನಿತ್ತ್ಯನಂದ,ಕಲ್ಮಾಡಿ ,ಯಡಿಯೂರಪ್ಪನಂಥ ಕಳ್ಳ ಮುಖಗಳ ಪರಿಚಯ ......ಹಾಕಿಯಲ್ಲಿ ವಿರಾವೆಶ ಪ್ರರ್ದಶನ ತೋರಿ ಕೊನೆಯ ಹಂತದಲ್ಲಿ ಸೋತು ಕ್ರೀಡಾಂಗಣದಲ್ಲಿ ಕಣ್ಣಿರಿತ್ತ ನಮ್ಮ ಮಹಿಳ ಹಾಕಿ ತಂಡದ ಸೋಲು,ರಾಜೀವ್ ದೀಕ್ಷಿತರ ನಿಧನದ ನೋವು ನಮ್ಮ ಮನಸಿನ ಮೂಲೆಗಳಲ್ಲಿ ........hmm ಇ ಮನಸೇ ಹೀಗೆ ಮತ್ತೆ ಮತ್ತೆ ಕಳೆದು ಹೋದ ದಿನಗಳನ್ನು ಮೆಲಕು ಹಾಕುತ್ತವೆ ........



ಹೀಗೆ ಹತ್ತು ಹಲವು ಮಜಲುಗಲೊಡನೆ ಸಾಗುವ ನಮ್ಮೆಲ್ಲರ ದಿನಗಳು ಒಂದು ದಿನದ ಸೂರ್ಯಸ್ತದಂತೆ ನಿದಾನವಾಗಿ ಮರೆಯಾಗುತ್ತದೆ ....ನಾವೆಲ್ಲೋ ಇ ಗಾಳಿಯ ದೂಳಿನೊಡನೆ ಸೇರುತ್ತೇವೆ ..........ಮತ್ತೆ ಹೊಸ ಕನಸುಗಳೊಂದಿಗೆ ಹೊಸ ಹೆಜ್ಜೆಗಳೊಂದಿಗೆ ಹೊಸ ದಿನಗಳಿಗಾಗಿ ಕಾದಿರುತ್ತೇನೆ……….jpg