ಬುಧವಾರ, ಡಿಸೆಂಬರ್ 22, 2010
ಬ್ಯಾಟ
ಅದೆಸ್ಟೋ ದಿನಗಳಾಗಿದ್ದವು ನಾನು ಮಲಗದೇ ನನ್ನ ದೇವರ ಜೋತೆ ಪ್ರಪಂಚವನ್ನೇ ಸುತ್ತುತಿದ್ದ ನನಗೆ ಸಂತೋಷ ನಿರಾಸೆಗಳ ಜೀವನ .....ಏನೋ ಒಂದು ಸಾದಿಸಿದ್ದೇನೆ ಎನ್ನುವ ಸಂತೋಷ .....ಕ್ರಿಕೆಟ್ ಜಗತ್ತಿನ ದೇವ ನನನ್ನು ಇಷ್ಟ ಪಟ್ಟಕೂಡಲೇ ನನ್ನ ಶೋಕೇಸಿನ ಗೆಳೆಯರೆಲ್ಲ ನೀನು ತುಂಬಾ ಲಕ್ಕಿ ಎಂದು ಹೊಗಳಿದ್ದರು ....ಅ ಮಾತು ಸುಳ್ಳಾಗಿಲ್ಲವಲ್ಲ...ಹ್ಮಂ ನಿಜವಾಗಿ ನಾನು ತುಂಬಾ ಪುಣ್ಯವಂತ.....ನನ್ನನು ಮೊದಲ ಸಲ ನೋಡಿದ ಕೆಲ ಸಹ ಆಟಗಾರರು ಏನಿದು ಇಸ್ಟೊಂದು ಬಾರವಾಗಿದೆ ಇದ್ರಲ್ಲಿ ಕ್ರಿಕೆಟ್ ಆಡಿದರೆ ಅಸ್ಟೆ ಎಂದು ನನ್ನ ಯಜಮಾನನಿಗೆ ಹಂಗಿಸುತ್ತ ಇದ್ದರು ...ಆದರೆ ಅವುಗಳಿಗೆಲ್ಲ ತಲೆ ಕೆಡಿಸಿದ ಅವರು ನನ್ನು ಪ್ರೀತಿಯಿಂದ ನೋಡುತಿದ್ದರು ಅಸ್ಟೆ .....ಸದಾ ಅವರ ಅಂತಪುರದೊಳಗೆ ಇರುತಿದ್ದ ನಾನು ಮತ್ತು ನನ್ನ ಸ್ನೇಹಿತರ ನಡುವೆ ಮಾತಿನ ಚಕಮಕಿ ನೆಡಯುತಿತ್ತು....ಅವರ ಹದಿನಾರರ ಆಟದಲ್ಲಿ ಬಳಸುತಿದ್ದವನೊಬ್ಬ ಸದಾ ಅವರ ಬಾಲ್ಯದ ದಿನಗಳ ಕತೆಗಳನ್ನು ನಮಗೆಲ್ಲ ಹೇಳುತಿದ್ದ .....ಅವರ ಸ್ನೇಹಿತ ಕಪ್ಪು ಹುಡುಗನ ಕತೆ ನನ್ನಲ್ಲಿ ವಿಷಾದದ ಅಲೆಯನ್ನು ಹುಟ್ಟು ಹಾಕಿತು .......ನನಗಿನ್ನೂ ನೆನಪಿದೆ ದೇವರು ಪ್ರೀತಿಸುತಿದ್ದ ಹುಡುಗಿಯೋಬಳನ್ನು ಮದುವೆಯಾದ ಸಮಯ ನಮಗೆಲ್ಲ ಖುಷಿಯೋ ಖುಷಿ .....ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು ನನ್ನ ಒಡೆಯ ....ಭಗವಂತ ಗಣೇಶ ಮತ್ತು ಬಾರತಂಬೆಯನ್ನು ಅತಿಯಾಗಿ ಪ್ರೀತಿಸುತಿದ್ದ ಅರಾದಿಸಿದವರು........
ನನ್ನ ದೇವರ ಅರಮನೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯುತಿದ್ದ ನನಗೆ ಅಗ್ನಿ ಪರೀಕ್ಷೆಯಾ ಕಾಲ ಬಂದೆ ಬಿಟ್ಟಿತ್ತು ......ಆ ದಿನ ಬಾರತ ಮತ್ತು ಅದರ ಪಕ್ಕದ ದೇಶವಾದ ಪಾಕಿಸ್ಥಾನದ ನಡುವಿನ ವಿಶ್ವಕಪ್ ಪಂದ್ಯವಾಗಿತ್ತು ಕ್ರೀಡಾ ಮೈದಾನದ ಸುತ್ತ ನಾನೆಲ್ಲೂ ಕಂಡಿರದ ಜನ ಚಿರಾಟದಲ್ಲಿ ತಲ್ಲಿನರಾಗಿದ್ದರು ......ಪಾಕಿಸ್ತಾನದ ಮೊದಲು ಬ್ಯಾಟ ಮಾಡಿತ್ತು ಮತ್ತದೇ ಬ್ರಹತ್ ಮೊತ್ತವನ್ನು ಬಾರತಕ್ಕೆ ಸವಾಲಾಗಿ ನೀಡಿತ್ತು ....ಅ ದಿನ ನೇರವಾಗಿ ನನ್ನ ಬಳಿ ಬಂದು ನನ್ನನ್ನು ಎತ್ತಿ ಕೊಂಡು ಒಂದು ಕ್ಷಣ ನನ್ನನು ದಿಟ್ಟಿಸಿದ ಅವರ ನೋಟ ನನ್ನಲ್ಲಿ ಹೆದರಿಕೆಯನ್ನು ತಂದಿತ್ತು ...ಹೇಗೆ ಮರೆಯಲಿ ಅ ಸವಾಲಿನ ಪಂದ್ಯ ನನ್ನೊಂದಿಗೆ ಅಂಕಣಕ್ಕಿಳಿದ ಕ್ರಿಕೆಟ್ ದೇವನಿಗೆ ಅದ್ಬುತ ಸ್ವಾಗಾತವನ್ನು ಪ್ರೇಕ್ಷಕರು ನೀಡಿದರು .ಆ ಸಮಯ ನನಗನ್ನಿಸಿದ್ದು ಇಸ್ಟೇ ಇವರ ಬಳಿ ಇರುವ ನಾನೇ ದನ್ಯ.....ಅವರ ಸ್ನೇಹಿತ ಗಂಗೂಲಿ ನನ್ನನ್ನು ನೋಡಿ ಕೇಳಿದರು ...ಮತ್ತದೇ ನಗು ಅವರಿಂದ ಹೊಮ್ಮಿತ್ತು ....
ಪಂದ್ಯ ಅರಂಬವಾದ ಕೆಲೆವೆ ಕ್ಷಣಗಳಲ್ಲಿ ದಾಳಿಗಿಳಿದ ಎಸೆತಗಾರನೊಬ್ಬ ಕ್ರೂರ ರಾಕ್ಸಸನಂತೆ ಕಂಡು ಬಂದ ...ಅವನ ಎಸೆತವೊಂದು ನನ್ನ ದೇವರ ತಲೆಯ ಮೇಲಿಂದ ಹಾಯ್ದು ಹೋಗಿತ್ತು ಅವನಿಗೆ ಬೆಂಬಲಿಸುತಿದ್ದ ಮತೊಬ್ಬ ಅವನನ್ನು ಎಂದು ಕರೆದಾಗ ಹೋ ಇವನ ಅ ರಾವಲ್ಪಿಂಡಿ EXPRESS ಎನ್ನುವುದನ್ನು ಖಚಿತ ಪಡಿಸಿಕೊಂಡೆ ....ಅದಾಗಿ ಎರಡನೆಯ ಎಸೆತವನ್ನು ಬಲವಾಗಿ ಸಿಮಾ ರೇಖೆಯ ಹೊರಕ್ಕೆ ತಳ್ಳಿ ಬಿಟ್ಟೆ ...ಮತ್ತೆ ನನ್ನನ್ನು ಅಭಿಮಾನದಿಂದ ನೋಡಿದ ದೇವರು ವೆರಿ ಗುಡ್ ಎಂದು ನನ್ನ ಬುಜವನ್ನು ಸವರಿದರು
ಟೀಂ ವಿಜಯದ ಹೊಸ್ತಿಲಿನಲ್ಲಿರುವಾಗಲೇ ಇನ್ನೇನು ಶತಕದ ಗಡಿ ದಾಟಿಸುತ್ತರೆಂಬ ಆಸೆಯಿಂದ ಕುಣಿದು ಕುಪ್ಪಳಿಸಿದೆ ಮತ್ತದೇ ದಾಳಿಗಿಳಿದ ರಾಕ್ಷಸ ನನಗರಿವಿಲ್ಲದಂತ ಬಾಲನ್ನು ಎಸೆದು ನನ್ನ ಆಸೆಗೆ ತನ್ನಿರೆರಚಿ ಬಿಟ್ಟ ...ಮತ್ತೆ ಗೆಲುವಿಗೆ ಕೆಲವೇ ರನ್ನುಗಳನ್ನು ಹೊಡೆದು ಪೂರೈಸಿದ ಆಟಗಾರರು ತಂಡವನ್ನು ಗೆಲುವಿನ ನಗು ಬೀರಲು ಸಹಕರಿಸಿದರು ....ಅ ಪಂದ್ಯದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಸ್ವಿಕರಿಸಿದ ನನ್ನ ದೇವ ನನ್ನ ಬಳಿ ಬಂದು ಹೆಯ್ಯ್ ಬ್ಯಾಡ್ ಲಕ್ ಕಾಣೋ ಎಂದು ನನಗೆ ಮುತ್ತಿಟ್ಟ ಕ್ಷಣ ನಾನು ರೋಮಂಚಿತಾನಗಿ ಅವರ ಗೆಲುವಿನ ನಗುವನ್ನು ಕಾಣುತ್ತ ಕುಳಿತು ಬಿಟ್ಟೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ