ಪುಟಗಳು

ಭಾನುವಾರ, ಜನವರಿ 2, 2011


ಅವಳು ಸುಂದರಿ ಅವನು ಅಸ್ಟೇ ಕೃಷ್ಣ ಸುಂದರ
ಅವಳಿಗಿನ್ನೂ ಇಪ್ಪತಯಿದರ ಹುಡುಗಿ ಅವನಿಗಾಗ ಮೂವತ್ತು ತುಂಬಿತ್ತು
ಇವರಿಬ್ಬರೇ ನನ್ನ ವಾಸ್ತವ ಕತೆಯ ಕವಿಗಳು

ಮತ್ತದೇ ವದು ವರರ ಅನ್ವೇಷನೆಯಲಿದ್ದರು ಮನೆಯವರು
ಎರೆಡು ಮನೆಯವರಲ್ಲಿ ಮಾತುಕತೆ ಮುಗಿಯಿತು
ಹುಡುಗಿ ತುಂಬಾ ಓದಿದ್ದಾಳಂತೆ ಹುಡುಗನಿಗೆ ಕೈ ತುಂಬಾ ಸಂಬಳವಂತೆ
ಹಾಗೆ ಅಂತೆ ಕಂತೆಯ ನಡುವೆ ಸಂಬಂದ ಕುದುರಿತ್ತು

ಮತ್ತೆನು ಕರಾವಳಿಯ ಜನರಲ್ಲವೆ ವರದಕ್ಷಿಣೆಯ ಮಾತು ಅಲ್ಲಿತ್ತು
ನೋಡು ನೋಡುತಿದ್ದಂತೆ ನಿಶಿತಾರ್ಥ ನಡೆದಿತ್ತು
ಮದುವೆಗೆ ಆರೇಳು ತಿಂಗಳು ಮಾತ್ರ ಬಾಕಿ ಇತ್ತು

ಹುಡುಗನಿಂದ ಹುಡುಗಿಗೆ ದಿನಕ್ಕಾರು ಫೋನ್ ಕಾಲ್
ನೇಸರನು ಬೆಳಗುವ ಮೊದಲೇ ಹುಡುಗಿಯಿಂದ ಮಿಸ್ ಕಾಲ್
ಮತ್ತದೇ ಪ್ರೀತಿ ಬೆಳೆದಿತ್ತು ಕನಸು ಕಂಡರವರು ಹಗಲಿರುಳು
ಇಲ್ಲಿ ತನಕವೂ ಎಲ್ಲವು ಸರಿಯಾಗೇ ಇತ್ತು
ಅವರ ಗ್ರಹಚಾರಕ್ಕೆ ಕೆಟ್ಟ ಸುದ್ದಿಯೊಂದು ಬಂತು

ಅ ದಿನ ಹುಡುಗಿ ಕಾಲ್ ಮಾಡಿಲ್ಲ ಅವಳ ಫೋನ್ ಸ್ವಿಚ್ ಆಫ್ ಇತ್ತು
ಹುಡುಗನ ಮನಸು ಹಾರಡ ತೊಡಗಿತ್ತು ಎದೆ ಬಡಿತ ಹೆಚ್ಚಾಗಿತ್ತು
ಮತ್ತೆರಡು ದಿನಗಳು ಕಳೆದಿತ್ತು ಅವನ ಹೆಸರಿಗೆ ಅವಳಿಂದ ಪತ್ರ ಒಂದು ಬಂದಿತ್ತು
ಪತ್ರದ ಸಾಲುಗಳು ಕೆಳಗಿನತಿತ್ತು

ನನ್ನ ಪ್ರೀತಿಯ ಹುಡುಗ, ಕಳೆದರೆಡು ದಿನಗಳಿಂದ ನಾನು ಜ್ವರದಿಂದ ಮಲಗಿದ್ದೆ
ನಿನ್ನೆ ತಲೆ ಸುತ್ತಿದಂತಾಗಿ ಆಸ್ಪತ್ರೆಗೆ ಹೋಗಿದ್ದೆ
ನಿನ್ನೆ ತಾನೆ ನನಗೆ ಗೊತ್ತಾಗಿದ್ದು
ನನಗೆ ಮುಂದೆ ಮಕ್ಕಳಾಗುವುದು ಅನುಮಾನವಂತೆ
ಅದೇನೋ ಗರ್ಬ ಕೋಶದ ತೊಂದರೆ
ಅದರಿಂದ ಬರುತಿತ್ತು ಇ ತಲೆ ಸುತ್ತು
ಮಾಡಲೇ ಬೇಕು ಅಪರೇಷನ್ ಅನ್ನುತಿದ್ದರೆ ನನ್ನ ಪರೀಕ್ಷೆ ಮಾಡಿದ್ದ ಡಾಕ್ಟರ……..
ಗೆಳೆಯ ಆಕಾಶ ಕಳಚಿ ಬಿದ್ದಂತೆ ಆಯಿತು
ನನಗೆ ದಿಕ್ಕು ತೊಚಾದಾಯಿತು
ನನ್ನ ಮನಸು
ಕನಸುಗಳೆಲ್ಲ ಕರಟಿ ಹೋಗಿದೆ…………
ಓ ನನ್ನ ಜೊತೆಗಾರ ಇ ಕಾರಣಕ್ಕಾಗಿ
ನಾನು ಮೂಕಳಾಗಿದ್ದೇನೆ ..
ನನ್ನ ಕೈಯ ಬಿಡದಿರು ಎಂದಸ್ಟೇ ಹೇಳಬಲ್ಲೆ
ಇಂತಿ ನಿನ್ನವಳು .......

ಕಾಗದವನ್ನು ಓದಿ ಮುಗಿಸುತ್ತಿದ್ದವನಿಗೆ
ಮುಖದಲ್ಲಿ ಬೆವರು ಇಳಿದಿತ್ತು ಮೌನ ಆವರಿಸಿತ್ತು
ಅದಕ್ಕವನು ಅವಕ್ಕಾಗಿ ಬಿಟ್ಟ
ಮನೆಯವರಿಗೆ ವಿಷಯ ತಿಳಿಸಿ ಬಿಟ್ಟ
ನನಗಿನ್ನೂ ಆ ಹುಡುಗಿ ಬೇಡವೆಂದು ಬಿಟ್ಟ
ಮಕ್ಕಳಾಗದ ಹುಡುಗಿ ನನಗ್ಯಾಕೆ? ಅಂದು ಬಿಟ್ಟ

ಮಾವನಾಗದ ಮಾವ ಹುಡುಗಿ ಮನೆಗೆ ಬಂದ
ಇ ಮದುವೆ ಕ್ಯಾನ್ಸಲ್ ಅಂದ .............

ಹುಡುಗಿ ಅತ್ತಳು ಅವಳೊಂದಿಗೆ ಅವಳ ಮನೆಯವರೆಲ್ಲ
ಮತ್ತೆ ಮತ್ತೆ ಮಾವನ ಕಾಲು ಹಿಡೀದು ಒಂದೇ ಸವನೆ ಅಳುತಿದ್ದಳು

ವಿಷಯ ತಿಳಿಯಿತು ಅವನ ತಮ್ಮನಿಗೆ
ಮತ್ತೆ ಒಂದೇ ಮಾತಲೀ ಅವಳ ಮನೆಗೆ ಬಂದವನೇ
ಅವಳಲ್ಲಿ ಹೇಳಿದವ ನಿ ಒಪ್ಪಿದರೆ ನಾ ಇ ಮದುವೆಗೆ ಸಿದ್ದ
ಅಳು ಬರುವ ಕಣ್ಣಲ್ಲಿ ಅಶ್ರುದಾರೆ ಸುರಿಯಿತು
ಮನದಲೊಂದು ದೇವರಂತೆ ಕಂಡನವ……….

ಇನ್ನೇನು ಬೇಕು ಆ ಸುಂದರಿಗೆ ಮತ್ತೆರೆಡು ತಿಂಗಳಲ್ಲಿ
ಮದುವೆ ಆಗಿತ್ತು ಇ ಸಜ್ಜನನೊಡನೆ .......

ಮತ್ತೇನೋ ಸಮಯ ಉರುಳಿತ್ತು ಮೊನ್ನೆ ಹೋಗಿದ್ದೆ ಆ ಮನೆಗೆ
ಬದಿಯ ಕೊನೆಯಲ್ಲಿ ಕುಳಿತಿದ್ದ ಆ ಮೊದಲ ನಿಶ್ಚಿತಾರ್ತದ ಹುಡುಗ

ಅರೆ ಕ್ಷಣಗಳಲ್ಲಿ ತಿಳಿಯಿತು ಅತ ಕಾಲು ಕಳೆದು ಕೊಂಡಿದ್ದ ಕಳೆದ ವರುಷದ ಕಾರ್ ಆಕ್ಸಿಡೆಂಟ್ನಲ್ಲಿ
ಮತ್ತವನ ತಮ್ಮ ಮತ್ತವಳು ಇದ್ದಾರೆ ಸುಖದಿಂದ ಬೆಂಗಳೂರಿನಲ್ಲಿ

ಮನದಲ್ಲನಿಸಿತು ಹುಡುಗಿ ಅದೃಷ್ಟವಂತೆ
ಮತ್ತನಿಸಿತು ಅವನು ಇನ್ನು ನಿಶಿತಾರ್ಥದ ಹುಡುಗ
ಜೆ.ಪಿ…………..



ಕಾಮೆಂಟ್‌ಗಳಿಲ್ಲ: