ಪುಟಗಳು

ಭಾನುವಾರ, ಜನವರಿ 2, 2011


ನಮ್ಮೂರ ಸುಬ್ಬಿಯ ಬಗ್ಗೆ ..........
ಮುಂಜಾನೆಯಿಂದ ಸಂಜೆಯಾ ತನಕ ಬಟ್ಟರ ಹೊಲದಲ್ಲಿ ಕೆಲಸ ಮಾಡುತಿದ್ದ ಸುಬ್ಬಿಸಂಜೆ ಗುಡಿಸಲಿಗೆ ಮರಳುವ ಮುನ್ನ ಕೊಂಚ ಸಾರಾಯಿಯನ್ನು ಕುಡಿದು ಹೋಗುತಿದ್ದಳು ....ಒಡಲ ಮತ್ತು ಮನದ ನೋವ ಮರೆಯಲೆಂದು ಕುಡಿತವನ್ನು ತನ್ನ ದಿನನಿತ್ಯದ ಬದುಕಿನಲ್ಲಿ ಅಳವಡಿಸಿ ಕೊಂಡಿದ್ದು ಬಿಟ್ಟರೆ ಸುಬ್ಬಿ ನಮ್ಮೆಲ್ಲರ ಅಚ್ಚು ಮೆಚ್ಚು ....ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಎಲ್ಲರೂ ಸುಬ್ಬಿವಿಗೆ ಗೆಳೆಯರು .....ಕೆಲಸಕ್ಕಾಗಿ ಹೊಲಕ್ಕೆ ಬರುತಿದ್ದ ಸುಬ್ಬಿ ಸದಾ ಜನಪದ ಹಾಡುಗಳನ್ನು ಹೇಳಿ ಎಲ್ಲರನ್ನು ಖುಷಿ ಪಡಿಸುತ್ತಿದ್ದಳು ...ಮೊನ್ನೆ ಊರಿನ ಬಾವಿಗೆ ಯಾರೋ ಮಕ್ಕಳು ಕಸ ಹಾಕಿದ್ದರೆ ಅಂದು ತಿಳಿದು ಚಿರಾಡಿದ್ದಳು.......ಎಲೆ ಅಡಿಕೆಯನ್ನು ತಿಂದು ತುಟಿಯನ್ನು ಕೆಂಪಗಿರಿಸಿ ಕೊಂಡು ನಗುತಿದ್ದಳು .......ತನ್ನ ನಾಲ್ಕನೆ ಮಗನು ಪಕ್ಕದ ಊರಿನ ಹುಡುಗಿಯೊಂದಿಗೆ ಓಡಿಹೋದಾಗ ....ನನ್ನ ಮಗನು ಸತ್ತಿದ್ದಾನೆ ಅವನ ಬೊಜ್ಜ ನಾಳೆ ಎಂದು ಹುಚ್ಚಿಯಂತೆ ಏನೇನೊ ಮಾತನಾಡುತಿದ್ದಳು.....ಊರಿನ ಯಾವ ಮೂಲೆಯಲ್ಲಿ ಯಕ್ಷಗನವಾದರು ಅಲ್ಲಿ ಹಾಜರಗುತಿದ್ದ ಅವಳು ಎಲ್ಲರಿಗೂ ಚಿರಪರಿಚಿತಳು ......

ನಾವು ಚಿಕ್ಕವರಿದ್ದೆವು ಆಗ ಚುನಾವಣೆಯ ಪ್ರಚಾರ ಊರಲ್ಲಿ ಸಾಗಿತ್ತು ಎಲ್ಲಿ ನೋಡಿದರಲ್ಲಿ ಬ್ಯಾನರಗಳು ಬಿದ್ದು ಕೊಂಡಿದ್ದವು ...ರಾಜಕಾರಣಿಗಳ ದೊಡ್ಡ ಫೋಟೋಗಳು ಸಿಕ್ಕ ಸಿಕ್ಕಲ್ಲಿ ನೆತಾಡುತಿದ್ದವು ಒಟ್ಟಿನಲ್ಲಿ ಪ್ಲಾಸ್ಟಿಕ್ ಬೆಳೆ ಚೆನ್ನಾಗಿ ಚಿಗುರಿತ್ತು ....ಚುನಾವಣೆಯ ಕಣದಲಿದ್ದ ಕಾಂಗ್ರೆಸಿನ ಅಬ್ಯರ್ಥಿ ಮೋಟಮ್ಮ (ಎಮ್ಮೆಯಂತೆ ಇರುದರಿಂದ ಆ ಹೆಸರು ಇಟ್ಟಿರಬಹುದು ) ನಮ್ಮೂರಿಗೆ ಚುನಾವಣ ಪ್ರಚಾರಕ್ಕೆ ಬಂದಿದ್ದಳು... ಸುಮ್ಮನೆ ಕೇಳಬೇಕೆ ನಮ್ಮರಿನ ಶಾಲೆಯಲ್ಲಿ ಆಯೋಜಿಸಿದ್ದ ಆ ಬಾಷಣ ಕಾರ್ಯಕ್ರಮಕ್ಕೆ ಸಾವಿರಾರು ಜನ ಸೇರಿದ್ದರು (ಮೊಟಮ್ಮನ ಬಾಷಣಕ್ಕಿಂತ ಅಲ್ಲಿ ಮಾಡಿರುವ ಬಿರಿಯಾನಿ ಮತ್ತು ಸರಾಯಿ ಸೇವೆಗಾಗಿ )
ಮೊದಲೇ ಮಾತಿನ ಮಲ್ಲಿಯಾಗಿದ್ದ ಸುಬ್ಬಿಸಬೆಯೊಳಗೆ ಕಾಲಿಟ್ಟು ಒಂದೇ ಸಮನೆ ಅವ್ಯಾಚ ಶಬ್ದಗಳಿಂದ ಹೆಯ್ಯ ರಾಂಡಿ ಮಕ್ಕಳ್ ನಮಗಿಲ್ ಒಪ್ಪತ್ತಿಗ್ ಉಮ್ಬ್ಕೆ ಗತಿ ಇಲ್ಲ ....ಊರ ಬದಿ ಗಂಡಸರಿಗೆ ಸರಾಯಿ ಕೊಡ್ತ್ರಿ ಅಲ್ದಾ ..ಒಂದ್ ಸೇರಕ್ಕಿ ಕೂಲಿಗೆ ಒಡಿಯರ ತೊಂಟದಗೆ ದುಡಿಕ.....ಅದೇ ದುಡ್ಡನ್ನ ಬಡವರಿಗೆ ಹಂಚುಕಾಗ್ದ .....ನಿಮ್ಮ ವಾಲೀ ಕಲಿತ್ತ ಅನ್ನುತ್ತ ಗಟ್ಟಿಯಾಗಿ ಕೂಗುತಿದ್ದ ಸುಬ್ಬಿಗೆ ಜನರೇ ಗದರಿಸಿದ್ದರು....



ಕಾಮೆಂಟ್‌ಗಳಿಲ್ಲ: