ಪುಟಗಳು

ಮಂಗಳವಾರ, ಜನವರಿ 18, 2011

ಕಣಿ ಹೇಳುವ ಹೆಂಗಸು ...........


ಸ್ವಲ್ಪ ಹಿಂದಿನ ಮಾತು ಆಗ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ನಾನು ಊರ ನೆನಪಾದಾಗಲೆಲ್ಲ ಊರಿಗೆ ೩-೪ ತಿಂಗಳಿಗೊಮ್ಮೆ ಬಂದು ಹೋಗುತಿದ್ದೆ....ಸದಾ ಬಸ್ಸಿನಲ್ಲಿ ಪ್ರಯಾಣ ಮಾಡಿ ಬೇಜಾರಾದ ನಾನು ಅ ಸಲ ಟ್ರೈನಲ್ಲಿ ಟ್ರಾವೆಲ್ ಮಾಡಬೇಕೆಂದು ನಿರ್ದರಿಸಿ ಟ್ರೈನ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದೆ ಒಂದು ಸಣ್ಣ ಬ್ಯಾಗ ಕೈಯಲ್ಲಿ ಬಿಟ್ಟರೆ ಬೇರೇನೂ ಲಗೇಜು ಇರಲಿಲ್ಲ ...ನಾನು ಮತ್ತು ನನ್ನ ಗೆಳೆಯರೆಲ್ಲ ತಿರುಪತಿಗೆ ಹೋದಾಗ ಟ್ರೈನಲ್ಲಿ ಹೋಗಿದ್ದೆವು ಹಾಗು ತುಂಬಾ ಖಷಿ ಪಟ್ಟಿದ್ದೆವು ...ಅದನ್ನು ಬಿಟ್ಟರೆ ನಾನು ಟ್ರೈನಲ್ಲಿ ಮತ್ತೆಂದು ಪ್ರಯಾಣ ಬೆಳಸಿರಲಿಲ್ಲ ...train ಸ್ಟೇಷನ್ ಗೆ ಹೋದ ಮೇಲೆ ತಿಳಿಯಿತು ಶಿವಮೊಗ್ಗದ ಟ್ರೈನ್ ಬರಲು ಇನ್ನು ಅರ್ದ ಗಂಟೆ ಕಾಯ ಬೇಕೆಂದು ...ಸರಿ ಇನ್ನೇನು ಮಾಡಲಿ ಟ್ರೈನ್ ದಾರಿಗಾಗಿ ಕಾಯ ತೊಡಗಿದೆ .....ನನ್ನ ಪಕ್ಕದಲ್ಲಿರುವ ಪ್ರಯಾಣಿಕರೊಬ್ಬರು ಮಾತನಾಡುತ್ತ ಇಲ್ಲಿ ಸೀಟ್ ಸಿಕ್ಕಿದರೆ ಅದೊಂದು ದೊಡ್ಡ ಸಾಹಸವೇ ಸರಿ ಅನ್ನುತಿದ್ದರು ಟ್ರೈನ್ ಬಂದೊಡನೆ ಎಲ್ಲರೂ ತಾ ಮುಂದೆ ನಾ ಮುಂದೆ ಎನ್ನುತ್ತಾ ಒಬ್ಬರ ಮೇಲೆ ಒಬ್ಬರ ಬಿಳುತ್ತ ಟ್ರೈನ್ ಹತ್ತ ತೊಡಗಿದರು ..ಅ ಜನ ಜಂಗುಳಿಯನ್ನು ನೋಡಿ ನನಗೆ ಸೀಟ್ ಸಿಕ್ಕಲ್ಲ ಅಂತ ಮನಸಲ್ಲೇ confirm ಮಾಡಿಕೊಂಡೆ .........ಸರಿ ಒಳಗೆ ಹೋಗಿ ನೋಡಿದರೆ ಸ್ವಲ್ಪ ಜನ ಕುಳಿತಿದ್ದರು ಸ್ವಲ್ಪ ಜನ ತನ್ನದೇ ಪ್ರಪಂಚ ಎನ್ನುವಂತೆ ಸಿಟಿನ ಉದ್ದಕ್ಕೂ ಕಾಲು ಚಾಚಿ ಮಲಗಿದ್ದರು ..ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಮಲಗಿದ್ದ ಪ್ರಯಾಣಿಕನ ನಡುವೆ ಜಗಳ ಸಾಗಿತ್ತು "ಹೇಯ ಅದ್ಯಾಕಪ್ಪ ಮಲ್ಕೊಂಡಿದ್ದಿಯ ಎಲ್ಲರು ಸೇರಿ ಕುತ್ಕೊಳ್ಳ ಬಾರದ ಅಂತ ಅವನು ...." ಹೇಯಿ ಏನ ಮಡ್ಕೊಳ್ತಿಯೋ ಮಾಡ್ಕೋ ಸಿಟ ಕೊಡೋಲ್ಲ ಅಂತ ಅವನು " ಅವರಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಮೊದಲೇ ಟಿಕೆಟ್ reserv ಮಾಡಿದರೆ ಇಸ್ಟೆಲ್ಲಾ ಪೋಬ್ಲೆಮ್ ಆಗ್ತಾ ಇರಲಿಲ್ಲ ಅನ್ನುತ್ತ ನನಗೆ ನಾನೇ ಹಳಿದು ಕೊಂಡೆ .......
ಅಲ್ಲಿ ಹೀಗೆ ಗಿಜಿ ಗಿಜಿ ಮಾತನಾಡುವ ಪ್ರಯಾಣಿಕರನ್ನು ಹೊತ್ತ ರೈಲು ಯಶವಂತಪುರ ಸ್ಟೇಷನ್ ನಲ್ಲಿ ಮತ್ತಷ್ಟು ಜನರನ್ನು ತನ್ನ ಹೊಟ್ಟೆಯೊಳಗೆ ಸೇರಿಸಿತ್ತು ....ಆಗ ಆ ಬೋಗಿಯೊಳಗೆ ಒಬ್ಬಳು ದೇವರ(ದೇವಿಯ) ಮೂರ್ತಿ ಹೊತ್ತ ಕಣಿ ಹೇಳುವ ಹೆಂಗಸು ಬಂದಿದ್ದಳು ..ನಾವು ಚಿಕ್ಕವರಿದ್ದಾಗ ಮನೆ ಮನೆಗೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಬರುತಿದ್ದವರು ದೇವರ ಪ್ರಸಾದ ಕೊಟ್ಟು ಕಾಣಿಕೆ ಪಡೆದು ಅದು ಇದು ಅಂತ ಕಣಿ ಹೇಳುತ್ತಾ ಸಾಗುತಿದ್ದರು...ಅವರು ದರಿಸುತಿದ್ದ ಮಣಿ ಸರ ಅವರ ಹೈರ್ ಸ್ಟೈಲ್ ಉತ್ತರ ಕನ್ನಡದ ಬಾಷೆ
ಅವರು ಮಾತನಾಡುವ ರೀತಿ ಎಲ್ಲವೂ ನಮಗೆ ಅವರಲ್ಲಿ ಆಸಕ್ತಿಯನ್ನು ಹುಟ್ಟು ಹಾಕುತಿತ್ತು ...ಅದೇನೇ ಇರಲಿ ಅವಳು ನಿಂತೇ ಇದ್ದಳು ಅದು ತಲೆಯ ಮೇಲೆ ಅ ಅಮ್ಮನವರ ದೇವರ ಮೂರ್ತಿಯನ್ನು ಹೊತ್ತು ಕೊಂಡೆ ನಿಂತಿದ್ದಳು ...ಯಾವೊಬ್ಬನು ಸಿಟಿನಿಂದ ಎದ್ದು ಬನ್ನಿ ಕುಳಿತು ಕೊಳ್ಳಿ ಎಂದು ಹೇಳಲೇ ಇಲ್ಲ ...ದೇವರೆಂದು ಕಂಡ ಕಂಡಲ್ಲಿ ಕೈ ಮುಗಿಯುವ ಜನ ಇವರೇನಾ ಅನ್ನಿಸಿತು ....ದೇವರಿಗೆ ಬೆಲೆ ಕೊಡದೆ ಇದ್ದಾರೆ ಪರವಾಗಿಲ್ಲ ಅ ಮೂರ್ತಿಯನ್ನು ಬಕ್ತಿಯಿಂದ ತಲೆಯ ಮೇಲೆ ಹೊತ್ತು ಒಂದು ರಾತ್ರಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಪ್ರಯಾಣಿಸುವ ಆ ಹೆಂಗಸಿನ ಮುಖವನ್ನು ನನ್ನಿಂದ ನೋಡಲಾಗುತ್ತಿರಲಿಲ್ಲ ..ಅವಳಿಗೆ ಯಾರು ಅನುಕಂಪ ತೋರಲೇ ಇಲ್ಲ ...... ಸಿಟಿನ ಮೇಲೆ ಕಾಲು ಚಾಚಿ ಮಲಗಿದ್ದವನನ್ನು ನೋಡಿ ಸಿಟ್ಟು ಬಂತಾದರೂ ಅವನೊಡನೆ ಜಗಳವಾಡಿ ಪ್ರಯಜನವಿಲ್ಲ ..ಕೆಸರ ಮೇಲೆ ಕಲ್ಲು ಹಾಕಿದ ಹಗೆ ಆಗುತಿತ್ತು .....ದೇವರು ಅದು ಇದು ಎನ್ನುವ ಜನ ಮಾನವಿತೆಯನ್ನು ಯಾಕೆ ಮರಯೂತ್ತಾರೆ ?..ಬಹುಶ ಅ ಒಂದು ನಂಬಿಕೆಯಿನದಲೇ ಆಕೆ ಕೊನೆಯ ತನಕ ಯಾವುದೇ ಆತಂಕವಿಲ್ಲದೆ ಮೂರ್ತಿಯನ್ನು ಹೊತ್ತುಕೊಂಡಿದ್ದಳು ...ಅವಳ ನಂಬಿಕೆ ಏಕಾಗ್ರತೆಗೆ ನಾನು ಸೋತು ಹೋದೆ .......ಮತ್ತೆ ನೋಡುತಿದ್ದಂತೆ ಶಿವಮೊಗ್ಗ ಬಂದೆ ಬಿಟ್ಟಿತು...ಮತ್ತವಳ ಮುಖದಲ್ಲಿ ನಗುವಿತ್ತು ದೇವರಿಗೆ ಅಲ್ಲಿನ ಪರಿಸರದಲ್ಲಿ ಸ್ವಾಗತವಿತ್ತು ....ನನಗೆ ಆ ರೈಲು ಪ್ರಯಾಣ ಸಾಕಾಗಿತ್ತು