ನಿನ್ನೆ NDTV ನ್ಯೂಸ್ ನೋಡ್ತಾ ಇದ್ದಂತೆ ನನ್ನ ಮನಸಿಗೆ ಸ್ವಲ್ಪ ಸಮಾಧಾನ ಕೊಟ್ಟ ವಿಷಯ ಅಂದರೆ youth attacks rajesh talwar ಎನ್ನುವ ಲೈನ್ ....ಅರುಷಿ ಕೊಲೆ ಪ್ರಕರಣದಲ್ಲಿ ಆರೋಪಿ ಹಾಗು ಅರುಷಿಯ ತಂದೆ ರಾಜೇಶ್ ತಲ್ವಾರ್ ಪ್ರಕರಣದಿಂದ ನುಣಿಚಿ ಕೊಂಡಿದ್ದವನಿಗೆ ಉತ್ಸವ್ ಶರ್ಮನಿಂದ ಗೂಸ ಬಿದ್ದಿತ್ತು ..ಕೊನೆಯ ಬಾರಿ ರುಚಿಕಾ ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಆರೋಪಿಯಾಗಿದ್ದ ಹರಿಯಾಣದ ಪೋಲಿಸ್ ಮಹಾ ನಿರ್ದೇಶಕ ರಾಥೋಡನಿಗೂ ಸಹ ಅದೇ ಉತ್ಸವ್ ಶರ್ಮ ಹಲ್ಲೆ ನಡೆಸಿದ್ದ .....ನಮ್ಮಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಥ ಹತ್ತು ಹಲವು ಪ್ರಕರಣಗಳು ಮಾದ್ಯಮಗಳು ಬಯಲು ಮಾಡಿದರು ಆರೋಪಿ ಮಾತ್ರ ತನ್ನ ಅದಿಕಾರ ಮತ್ತು ಹಣ ಬಲದಿಂದ ಬಹು ಸುಲಬವಾಗಿ ಬಚಾವ ಆಗುತಿದ್ದಾನೆ ....ನಾವೆಲ್ಲರೂ ಮುಕ ಪ್ರೇಕ್ಷಕರಂತೆ ಅದನ್ನೆಲ್ಲಾ ನೋಡುತ್ತಾ ಚರ್ಚೆ ಮಾಡುತ್ತ ನಮ್ಮ ದಿನ ಸಾಗಿಸುತ್ತೇವೆ....ಇಂತವರ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತವೆ .....ದೇಶ,ರಾಜ್ಯ ,ಭಾಷೆ ಎನ್ನುತ್ತಾ ಮಾತಾಡಿ ಜನರನ್ನು ಬೇರೆ ಬೇರೆ ಗುಂಪಾಗಿ ಮಾಡಿ ಪ್ರಚಾರ ಗಿಟ್ಟಿಸುವ ಬಿಕನಾಸಿ ಹೋರಾಟಗಾರರು ನಮ್ಮಲ್ಲಿ ಬಿದಿಗೊಬ್ಬರಂತೆ ಇದ್ದಾರೆ ...ಮಾತೆತ್ತಿದರೆ ಧರ್ಮ,ಭಾಷೆ ಎನ್ನುತ್ತಾ ಸಾಗುವ ಇವರು ನಾವೆಲ್ಲ ಒಂದೇ ಎನ್ನುವ ಮಾತನ್ನ ಯಾಕೆ ಹೇಳುದಿಲ್ಲ ...ಪತ್ರಕರ್ತರು ಜನರ ನಡುವೆ ಪ್ರಚಾರ ಗಿಟ್ಟಿಸಲು ಹೋಗಿ ಅವರವರಲ್ಲಿ ಜಗಳ ಮಾಡಿಕೊಳ್ಳುತ್ತಿರುವ್ದು ಸಾಮಾನ್ಯವಾಗಿ ಬಿಟ್ಟಿದೆ .......ಹಿಂದಿನಿಂದ ರಾಜಕಾರಣಿಗಳಿಗೆ ಬೈದು ಅವರಿಗೆ ಛತ್ರಿ ಹಿಡಿದು ತಿರುಗುವ ನಮ್ಮ ಜನ ಯಾಕೆ ಇನ್ನೊಬ್ಬರಿಗೆ ಅನ್ಯಾಯವಗುದನ್ನು ನೋಡುತ್ತಾ ಸುಮ್ಮನಿರುತ್ತಾರೆ ... ನಿತ್ಯನಂದನಂತ ಕಳ್ಳರು ಇನ್ನು ನಮ್ಮ ನಡುವೆ ಮೆರಯೂತಿದ್ದರೆ ...ಭಗತ್ ಸಿಂಗ್ ಬೇಕು ಆದ್ರೆ ನಮ್ಮ ಮನೆಯಲ್ಲಿ ಹುಟ್ಟ ಆತ ಹುಟ್ಟಬಾರದು ಎನ್ನುವವರು ನಾವೆಲ್ಲ ...ಅನ್ಯಾಯವಾಗಿ ಒಂದು ಹುಡುಗಿಯ ಸಾವಿಗೆ ಕಾರಣವಾದ ರಾಥೋಡನಂತ ಕಳ್ಳರನ್ನು ನಾವು ಯಾಕೆ ಇನ್ನು ಬದುಕಲು ಬಿದುತಿದ್ದೇವೆ ಅನ್ನುವುದೇ ಕಾಡುತ್ತಿರುವ ಪ್ರಶ್ನೆ .........
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ