ಪುಟಗಳು

ಭಾನುವಾರ, ಜನವರಿ 23, 2011

ಮಾಸ್ತರು ಹೇಳಿದ ಕತೆ ..........




ಬಹಳ ಹಿಂದಿನ ಮಾತು ಬರಗಾಲದ ಸಮಯ
ಅದೊಂದು ಸಣ್ಣ ಊರು ಅಲ್ಲೊಂದು ಬಡ ಹೆಂಗಸಿನ ಮನೆ ಇದ್ದಿತ್ತು ..ಅ ಮನೆಯಲ್ಲಿ ಪಾಪ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ ..ಅದೇ ಊರಿನಲ್ಲಿ ಒಬ್ಬ ಬಿಕ್ಷುಕ ಇದ್ದಿದ್ದ ಅವನು ದಿನ ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತಿದ್ದ ...ವಿಶೇಷ ಅಂದ್ರೆ ಆ ಊರಿನಲ್ಲಿ ಯಾರ ಮನೆಗೂ ಅತ ಬಿಕ್ಷೆಗೆ ಹೋದ್ರು ಅವನಿಗೆ ಬೈದು ಕಲ್ಸ್ತ ಇದ್ದರು..."ಹೆಯ ಹೋಗಪ್ಪ ನಮಗೆ ಊಟ ಮಾಡ್ಲಿಕ್ಕೆ ಇಲ್ಲ್ಲ ಇವ ಬೇರೆ " ಅಂತ ಗದರಿಸಿ ಅವನಿಗೆ ಬರಿ ಕೈಯಿಂದ ಕಳಿಸ್ತ ಇದ್ದರು .........ಪಾಪ ಆ ಹೆಂಗಸು ಮಾತ್ರ ಆಕೆಯ ಊಟದಲ್ಲಿ ಆತನಿಗೆ ಒಂದು ಪಾಲನ್ನು ದಿನ ಕೊಡುತ್ತ ಇದ್ದಳು ..ಸರಿ ಅವನು ಖುಷಿಯಿಂದ ಅಲ್ಲಿ ಊಟ ಮಾಡಿ ಹೋಗ್ತಾ ಇದ್ದ .....ಹೀಗೆ ಕಳಿತ ಇರಬೇಕಾದ್ರೆ ಒಂದು ದಿನ ಆ ಹೆಂಗಸು ಸಹ ಏನೋ ಕಾರಣದಿಂದ ಅಡುಗೆನ ಮಾಡಿರಲಿಲ್ಲ ಅವಳು ಸಹ ಉಪವಾಸ ಇದ್ದಿದ್ದಳು ಮಾಮೂಲಿಯಂತೆ ಬಿಕ್ಷುಕ ಅವಳ ಮನೆಗೆ ಬಂದು ಅಮ್ಮ ಬಿಕ್ಷೆ ಅಂತ ಕೂಗ ತೊಡಗಿದ ...ಪಾಪ ಅವಳು ಎಲ್ಲಿಂದ ಬಿಕ್ಷೆ ಕೊಡೋದು "ಇವತ್ತು ಬಿಕ್ಷೆ ಇಲ್ಲಪ್ಪ ನಾನು ಸಹ ಉಪವಾಸ ಇದ್ದೀನಿ " ಅಂತ ಹೇಳಿ ಅವನ ಬಗ್ಗೆ ಕರುಣಾಬಾವದಿಂದ ನೋಡಿದಳು ..ಅದಕ್ಕೆ ಬಿಕ್ಷುಕ ಸಿಟ್ಟಿನಿಂದ ಅವಳನ್ನು ನೋಡಿ" ಇ ರಾಂಡಿಗೆ ಇವತ್ತ ಏನಾಗಿದೆ ನಾನು ಬರ್ತೀನಿ ಅಂತ ಗೊತ್ತಿಲ್ವ " ಎಂದು ಅವಳಿಗೆ ಬೈಯುತ್ತ ಅಲ್ಲಿಂದ ಜಾಗ ಕಿತ್ತ ................
ಕೆಲವೊಂದು ಸಲ ಜನ ಹಿಂದಿನ ದಿನಗಳನ್ನು ಮರೆತು ಬಿಡುತ್ತಾರೆ ತಮಗೆ ಯಾವಾಗಲು ಸಹಾಯ ಮಾಡುವವರು ಒಮ್ಮೆ ಅವರು ಮಾಡಲು ಅಶಕ್ತರಾದೊಡನೆ ಅವರ ಮನಸ್ಸನ್ನು ನೋಯಿಸುತ್ತಾರೆ ....ತಮ್ಮನೂ ಪ್ರೀತಿಸಿದ ತಂದೆ ತಾಯಿಗಳನ್ನ ದ್ವೇಷಿಸುತ್ತಾರೆ ...

ಕಾಮೆಂಟ್‌ಗಳಿಲ್ಲ: